
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ತಾಲೂಕಿನ ಮುಧೋಳ – ನಿಪ್ಪಾಣಿ ಮುಖ್ಯ ರಸ್ತೆಯಿಂದ ನಾಯಿಂಗ್ಲಜ ಗ್ರಾಮದವರೆಗೆ ರಸ್ತೆ ಸುಧಾರಣೆಗೆ ವಿಧಾನ ಪರಿಷತ್ತಿನ ಸರಕಾರಿ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಲೋಕೋಪಯೋಗಿ ಇಲಾಖೆಯಿಂದ ರೂ. 2.50 ಕೋಟಿ ಅನುದಾನ ಮಂಜೂರು ಮಾಡಿಸಿದ್ದರು. ಶುಕ್ರವಾರ ಕಾಮಗಾರಿಗೆ ಪೂಜೆ ಸಲ್ಲಿಸಿದರು.
ಈ ವೇಳೆ ನಾಯಿಂಗ್ಲಜ ಗ್ರಾಮ ಪಂಚಾಯತ ಅಧ್ಯಕ್ಷ ನಾಯಿಕ, ಎಸ್ ಕೆ ಕುರಬರ, ಶರದ ಶಿಂಧೆ , ಸುನೀಲ ಮೋರೆ, ಕುಠಾಳಿ ಗ್ರಾಮದ ಮುಖಂಡರಾದ ಜಾನಕಾರೆ, ಬಾಬುರಾವ ಚೌಗಲಾ, ಶಂಕರ ದೆಮನ್ನವರ, ಪ್ರಕಾಶ ಮಗದುಮ್ಮ, ಧುಳಗುನವಾಡಿ ಗ್ರಾಮದ ಅಣ್ಣು ಮಗದುಮ್ಮ, ರಾವಸಾಬ ಕಮತೆ , ಕಮತೆ ಹಾಗೂ ನವಲಿಹಾಳ ಗ್ರಾಮದ ಸುನೀಲ ಕಮತೆ, ಹುವನ್ನವರ ಕುಠಾಳಿ, ನವಲಿಹಾಳ, ನಾಯಿಂಗ್ಲಜ ಹಾಗೂ ಧುಳಗುನವಾಡಿ ಗ್ರಾಮಸ್ಥರು ಹಾಜರಿದ್ದರು.

ಈ ವೇಳೆ ಮಾಜಿ ಜಿ ಪಂ ಸದಸ್ಯರಾದ ಸುಜಾತಾ ಖೋತ, ಮುಖಂಡರಾದ ಜಯಕುಮಾರ ಖೋತ, ಪ್ರಕಾಶ ಪಾಟೀಲ, ಉದಯ ಖೋತ, ರಾಜಕುಮಾರ ಖೋತ, ಅಣ್ಣಪ್ಪ ತಾರದಾಳೆ, ಜಿತೇಶ ಖೋತ, ಅನಿಲ ಖೋತ, ಮಲಗೌಡಾ ಪಾಟೀಲ ಹಾಜರಿದ್ದರು.