Latest

ರಸ್ತೆ ಗುಂಡಿ, ಟ್ರಾಫಿಕ್ ನಿಂದ ಹೆಚ್ಚಿದ ಡಿವೋರ್ಸ್ ಕೇಸ್ ಹೆಚ್ಚಳ; ದೇವೇಂದ್ರ ಫಡ್ನವಿಸ್ ಪತ್ನಿ ಆರೋಪ

ಪ್ರಗತಿವಾಹಿನಿ ಸುದ್ದಿ; ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ರಸ್ತೆ ಗುಂಡಿ, ಟ್ರಾಫಿಕ್ ಸಮಸ್ಯೆಯಿಂದಾಗಿ ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ ಎಂದು ಮಹಾರಾಷ್ಟ್ರ ಮಾಜಿ ಸಿಎಂ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಪತ್ನಿ ಅಮೃತಾ ಫಡ್ನವಿಸ್ ಆರೋಪಿಸಿದ್ದಾರೆ.

ಮುಂಬೈ ಮಹಾನಗರದಲ್ಲಿ ಶೇ.3ರಷ್ಟು ಮದುವೆ ಮುರಿಯಲು ರಸ್ತೆ ಗುಂಡಿ, ಟ್ರಾಫಿಕ್ ಸಮಸ್ಯೆ ಕಾರಣ. ನಾನೋರ್ವ ರಾಜಕೀಯ ನಾಯಕನ ಪತ್ನಿಯಾಗಿ ಈ ಮಾತು ಹೇಳುತ್ತಿಲ್ಲ. ಸಾಮಾನ್ಯ ಪ್ರಜೆಯಾಗಿ ಈ ಮಾತು ಹೇಳುತ್ತಿದ್ದೇನೆ ಎಂದರು.

Home add -Advt

ಟ್ರಾಫಿಕ್ ಸಮಸ್ಯೆಯಿಂದಾಗಿ ಜನರು ಪ್ರಯಾಣದಲ್ಲಿಯೇ ಸಮಯ ಕಳೆಯುತ್ತಿದ್ದಾರೆ ಹೊರತು ಕುಟುಂಬದ ಜತೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಮದುವೆ ಮುರಿದು ಬೀಳುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಅಮೃತಾ ಫಡ್ನವಿಸ್ ಹೇಳಿಕೆಗೆ ತಿರುಗೇಟು ನೀಡಿರುವ ಮುಂಬೈ ಮೇಯರ್ ಕಿಶೋರಿ ಪಡ್ನೇಕರ್, ಮುಂಬೈ ಹೆಸರಿಗೆ ಕಳಂಕ ತರಲು ಫಡ್ನವಿಸ್ ಪತ್ನಿ ಯತ್ನಿಸಿದ್ದಾರೆ. ಇದು ಸುಳ್ಳು ಆರೋಪವಾಗಿದೆ ಎಂದು ಹೇಳಿದ್ದಾರೆ.
ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಆರೋಗ್ಯಸ್ಥಿತಿ ಇನ್ನಷ್ಟು ಗಂಭೀರ

Related Articles

Back to top button