Belagavi NewsBelgaum NewsKannada NewsKarnataka NewsNationalPolitics
*ಬೆಳಗಾವಿ ಗಡಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಗಡಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದೆ. ಮನೆಗೆ ನುಗ್ಗಿ ಮಹಿಳೆ ಮಕ್ಕಳು ಎಂದು ಲೆಕ್ಕಿಸದೆ ಲಾಂಗ್ ಮಚ್ಚಿನಿಂದ ಹಲ್ಲೆ ಮಾಡಿ ಅಟ್ಟಹಾಸ ಮೇರೆದಿದ್ದಾರೆ.
ಸುಮಾರು ಐದು ಜನರ ಗುಂಪೊಂದು ಕೈಯಲ್ಲಿ ಮಾರಕಾಸ್ತ್ರ ಹಿಡಿದು ಬಾಗಿಲು ಮುರಿದು ಮಹಿಳೆಯರ ಮೇಲೆ ಹಲ್ಲೆಗೆ ಯತ್ನಿಸಿ ಓರ್ವನ ಹೊಟ್ಟೆಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ. ಸಂಜಯ ರಾಮಚಂದ್ರ ಟೋಣೆ ಗಂಭೀರ ಗಾಯಗೊಂಡಿದ್ದು ಆತನನ್ನ ಮಿರಜ್ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ರವಿ ಮಿಸಾಳ, ದಾದಾಸಾಬ ಟೋಣೆ, ವಿಜಯ, ರಮೇಶ, ಪಪ್ಪು – ಈ ಐವರ ಗ್ಯಾಂಗ್ ಮನೆ ಹೊರಗಡೆ ನಿಂತ ಪಿಕಪ್ ವಾಹನಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೈಯಲ್ಲಿ ಲಾಂಗ್ ಮಚ್ಚು ಹಿಡಿದು ಅಟ್ಟಹಾಸ ಮೆರೆದಿದ್ದಾರೆ.
ಮನೆ, ಅಂಗಡಿಗೆ ನುಗ್ಗಿ ದಾಂಧಲೆ ಮಾಡಿದವರ ವಿರುದ್ಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು ತೀವ್ರ ತನಿಖೆ ಶುರು ಮಾಡಿದ್ದಾರೆ.