ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಯು ಜಿ ಕೇಬಲ್ ಕೆಲಸ ಕೈಗೊಳ್ಳುವ ಸಲುವಾಗಿ ೩೩ ಕೆವಿ ಆರ್ ಎಂ-೨ ಮತ್ತು ೩೩ ಕೆವಿ ಆರ್ ಎಂ-೧ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-೬ ಟಿಳಕವಾಡಿ ಹಾಗೂ ಎಫ್-೩ ಆರ್.ಪಿ.ಡಿ ಪೂರಕದ ಮೇಲೆ ಬರುವ ರಾಣಾ ಪ್ರತಾಪರೋಡ, ರವಿಂದ್ರನಾಥ ಠಾಗೋರ್ ರೋಡ್, ಎಂ.ಜಿ.ರೋಡ್, ಹಿಂದುನಗರ, ಅಗರಕರರೋಡ್, ರಾಯರೋಡ್, ರಾನಡೆರೋಡ್, ಮರಾಠಾ ಕಾಲೋನಿ, ೨ನೇ ರೈಲ್ವೆಗೇಟ್ (ಎಸ್.ವಿ ಕಾಲೋನಿ) ಹಾಗೂ ಕುಡುತಕರ ಕಂಪೌಂಡ್, ಶಿವಾಜಿ ಇಂಜಿನಿಯರಿಂಗ್, ಪೂರಾನಿಕ ಟಿ.ಸಿ. ಸೋಮವಾರ ಪೇಟ, ಆರ್ ಪಿ ಡಿ ಪ್ರದೇಶಗಳಲ್ಲಿ ಮೇ ೧೫ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಾಯಂಕಾಲ ೬ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಾಗೆಯೇ, ೩೩/೧೧ ಕೆವಿ ಆರ್ ಎಂ-೨ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-೧ ಕಂಟೋನ್ಮೆಂಟ್ ಪೂರಕದ ಮೇಲೆ ಬರುವ ಆಫೀಸರ್ ಮೆಸ್ ಮತ್ತು ಕಂಟೋನ್ಮೆಂಟ್ ಎರಿಯಾ, ಹಾಯ್ ಸ್ಟ್ರಿಟ್ ಹೆವಲಾಕ್‌ರೋಡ್, ಸುತಾರಿಯಾ ೨೫೦ ಕೆ.ವಿ. ಟಿ.ಸಿ., ಚಿಲರನ್ಸ್ ಹಾಸ್ಪಿಟಲ್ ಟಿ.ಸಿ. ಪ್ರದೇಶಗಳಲ್ಲಿ ಸಹ ಬುಧವಾರ ಬೆಳಿಗ್ಗೆ ೧೦ ಗಂಟೆಯಿಂದ ಸಾಯಂಕಾಲ ೬ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.