
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ 33/11 ಕೆ.ವಿ. ಶ್ರೀನಗರ ವಿದ್ಯುತ್ ಉಪಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ನವೆಂಬರ್ 16ರಂದು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಶ್ರೀನಗರ ಉಪಕೇಂದ್ರದ ಎಫ್-2 ಶ್ರೀನಗರ, ಎಫ್-3 ಆಂಜನೇಯ ನಗರ ಹಾಗೂ ಎಫ್-7 ಐಸಿಎಂಆರ್ ಫೀಡರ್‌ಗಳ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ಈ ಅವಧಿಯಲ್ಲಿ ಶ್ರೀನಗರ, ಚನ್ನಮ್ಮ ಸೊಸೈಟಿ, ವಂಟಮೂರಿ ಕಾಲೋನಿ, ಸೆಕ್ಟರ್ ನಂ.5, ಶ್ರೀನಗರ ಗಾರ್ಡನ್ ಡಬಲ್ ರೋಡ್, ಸಾಯಿ ಮಂದಿರ ಪ್ರದೇಶ, ಆಂಜನೇಯ ನಗರ, ಸೆಕ್ಟರ್ ನಂ.10, ಗಣೇಶ ಮಂದಿರ, ಐಟಿ ಕಾಲೋನಿ, ಲವ್ ಡೇಲ್ ಶಾಲೆ, ಸೆಕ್ಟರ್ ನಂ.12, ಖುಸ್ರೋ ನಗರ ಹಾಗೂ ಐಸಿಎಂಆರ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ಹಾಗೂ ಗ್ರಾಹಕರು ಸಹಕರಿಸುವಂತೆ ಹುವಿಸಕಂನಿ ಬೆಳಗಾವಿ ನಗರ ವಿಭಾಗದ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




