*ನ.23ರಂದು ಬೆಳಗಾವಿಯ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯಿಂದ (ಹೆಸ್ಕಾಂ) 3ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 23ರಂದು ಬೆಳಗಾವಿ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಅಂದು ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ 110/11 ಕೆ.ವಿ. ಕಣಬರ್ಗಿ ಉಪಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುವ ಎಫ್-4 ರಾಮತೀರ್ಥ ನಗರ, ಎಫ್-5 ಶಿವಾಲಯ, ಎಫ್-3 ಕಣಬರ್ಗಿ, ಎಫ್-8 ಯಮನಾಪುರ ಸೇರಿದಂತೆ 33 ಕೆ.ವಿ. ಮ್ಯಾರಿಯಟ್ ಹೋಟೆಲ್, ವೆಲ್ಕಮ್ ಹೋಟೆಲ್ ಹೆಚ್.ಟಿ. ಸ್ಥಾವರ, ವುಡ್ ರೋಸ್ ಹೋಟೆಲ್ ಹಾಗೂ ಕಾಕತಿ ಕೈಗಾರಿಕಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇದಲ್ಲದೆ ಸಿದ್ದೇಶ್ವರ ನಗರ, ರಾಮತೀರ್ಥ ನಗರದ ವಿವಿಧ ಬಡಾವಣೆಗಳು, ಶಿವಶಕ್ತಿ ಕಾಲೋನಿ, ಬಸವೇಶ್ವರ ಬಡಾವಣೆ, ಕಣಬರ್ಗಿ ಗ್ರಾಮ, ಕಣಬರ್ಗಿ ರಸ್ತೆ, ಶೃತಿ ಪಾರ್ಕ್, ಫಾರ್ಚೂನ್ ಕಾಲೋನಿ, ರೆವೆನ್ಯೂ ಕಾಲೋನಿ, ರೇಣುಕಾ ನಗರ, ಕುಲಕರ್ಣಿ ಲೇಔಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂನ ಬೆಳಗಾವಿ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




