ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಕ್ಟೋಬರ್ 23ರಂದು ಬೆಳಗಾವಿ ಹಾಗೂ ಖಾನಾಪುರ ತಾಲೂಕಿನ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಬೆಳಿಗ್ಗೆ 9 ರಿಂದ ಮಧ್ಯಾಹ್ನ 3ರ ವರೆಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ವತಿಯಿಂದ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ 110 ಕೆ.ವಿ. ಮಚ್ಛೆ ಉಪಕೇಂದ್ರದಿಂದ ಸರಬರಾಜು ಆಗುವ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗುವುದು.
ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳ ಮಾಹಿತಿ ಇಂತಿದೆ:
ಬೆಳಗಾವಿ ತಾಲೂಕು: ದತ್ತ ನಗರ, ನಾವಗೇಕರ ನಗರ, ಹವಳ ನಗರ, ಗೋಡಸೆ ಕಾಲನಿ, ಓಂಕಾರ ನಗರ, ಮಚ್ಛೆ, ಝಾಡಶಹಾಪುರ, ದೇಸೂರ, ಸುಸಗ್ಯಾನಟ್ಟಿ, ಬಳಗಾಮಟ್ಟಿ, ಕುಟ್ಟಲವಾಡಿ, ಬಾಮನವಾಡಿ, ನಾವಗೆ, ಜಾನೇವಾಡಿ, ಬಾದರವಾಡಿ, ರಣಕುಂಡೆ, ಕರ್ಲೇ, ಕಿಣಯೇ, ಸಂತಿ ಬಸ್ತವಾಡ, ಕಾಳೇನಟ್ಟಿ, ವಾಘವಾಡೆ, ರಂಗಧೋಳಿ, ಪೀರಣವಾಡಿ, ಖಾದರವಾಡಿ, ಮಾರ್ಕಂಡೇಯ ನಗರ, ವಾಲ್ಮೀಕಿ ನಗರ, ತೀರ್ಥಕುಂಡೆ, ಹುಂಚ್ಯಾನಟ್ಟಿ, ಅಶೋಕ ಐರನ್ ಕಾಲನಿ, ನಾವಗೆ, ವಾಘವಾಡೆ ಹಾಗೂ ಮಚ್ಚೆ ಔದ್ಯೋಗಿಕ ವಸಾಹತು.
ಖಾನಾಪುರ ತಾಲೂಕು: ಉಚವಡಾ, ಕುಸಮಳಿ, ಬೈಲೂರ, ಮೊರಬ, ಜಾಂಬೋಟಿ, ಓಲಮನಿ, ವಡಗಾಂವ, ದಾರೋಳಿ, ಚಾಪೋಲಿ, ಕಾಪೋಲಿ, ಮುಡವಿ, ಹಬ್ಬಾನಟ್ಟಿ, ದೇವಾಚಿಹಟ್ಟಿ, ತೋರಾಳಿ, ಗೋಲ್ಯಾಳಿ, ಬೆಟಗೇರಿ, ತಳೇವಾಡಿ, ಅಮಟೆ, ಕಾಲಮನಿ, ಚಿಕಲೆ, ಕಣಕುಂಬಿ, ಗವಸೆ, ಅಮಗಾಂವ, ಬೇಟ್ನೆ, ಪಾರವಾಡ, ಚಿಗುಳೆ, ಮಾನ, ಸಡಾ, ಚೋರ್ಲಾ, ಹಳೆ ಹಾಗೂ ಹೊಸ ಹುಳಂದ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ