Belagavi NewsBelgaum NewsKannada NewsKarnataka News

ಪಾಕ್ ಪರ ಘೋಷಣೆ: ಆರೋಪಿಗೆ ಥಳಿತ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನ್ಯಾಯಾಲಯದ ಆವರಣದಲ್ಲಿ ಪಾಕ್ ಪರ ಘೋಷಣೆ ಕೂಗಿದ ಎನ್ನುವ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ವಕೀಲಕರೇ ಥಳಿಸಿದ ಘಟನೆ ಬುಧವಾರ ನಡೆದಿದೆ.

ಬೆಳಗಾವಿ ನ್ಯಾಯಾಲಯದ ಆವರಣ ಎಂದಿನಂತೆ ಜನಜಂಗುಳಿಯಿಂದ ಕೂಡಿತ್ತು. ನ್ಯಾಯಾಲಯದ ವಿಚಾರಣೆಗೆ ಬಂದಿದ್ದ ವ್ಯಕ್ತಿಯೋರ್ವ ಪಾಕ್ ಪರ ಘೋಷಣೆ ಕೂಗಿದ ಎನ್ನುವ ಆರೋಪದ ಮೇಲೆ ಬೆಳಗಾವಿ ವಕೀಲರು ಯುವಕನನ್ನು ಥಳಿಸಿದ್ದಾರೆ‌. ಸ್ಥಳಕ್ಕೆ ಆಗಮಿಸಿದ ಎಪಿಎಂಸಿ ಪೊಲೀಸರು ಯುವಕನನ್ನು ಕರೆದೊಯ್ದರು.

Home add -Advt

ನಿತೀನ್ ಗಡ್ಕರಿ ಹಾಗೂ ಐಪಿಎಸ್ ಅಧಿಕಾರಿ ಅಲೋಕುಮಾರ್ ಗೆ ಜೀವ ಬೆದರಿಕೆ ಹಾಕಿದ್ದ ಆರೋಪದಲ್ಲಿ ವಿಚಾರಣೆಗೆ ಬಂದಿದ್ದ ಜಯೇಶ್ ಪೂಜಾರಿ ಎಂಬ ಆರೋಪಿಯಾಗಿದ್ದಾನೆ.

Related Articles

Back to top button