
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕ.ವಿ.ಪ್ರ.ನಿ.ನಿ. ವತಿಯಿಂದ 110 ಕೆ.ವಿ. ಕಣಬರ್ಗಿ ಉಪಕೇಂದ್ರದಲ್ಲಿ ಮೊದಲನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಈ ಉಪಕೇಂದ್ರದಿಂದ ಸರಬರಾಜು ಆಗುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ.
ಮುಚ್ಚಂಡಿ, ಅಷ್ಟೆ, ಕ್ಯಾಂಪ್‌ಬೆಲ್, ಮಾರಿಹಾಳ, ಕರಡಿಗುದ್ದಿ, ಪಂತಬಾಳೇಕುಂದ್ರಿ, ಬಾಳೇಕುಂದ್ರಿ, ಹೊನ್ನಿಹಾಳ, ಮಾವಿನಕಟ್ಟಿ, ತಾರಿಹಾಳ, ಚಂದನ ಹೊಸೂರ, ಎಮ್.ಇ.ಎಸ್. ಸಾಂಬ್ರಾ, ಮುತಗಾ, ಸುಳೇಭಾವಿ, ಪಂತ ನಗರ, ಮೋದಗಾ, ಯದ್ಧಲಭಾವಿಹಟ್ಟಿ, ಖನಗಾಂವ, ಚಂದೂರ, ಚಂದಗಡ, ಗಣಿಕೊಪ್ಪ, ಗುಂಜ್ಯಾನಟ್ಟಿ, ಕೇದನೂರ, ಮನ್ನಿಕೇರಿ, ಹಂದಿಗನೂರ, ಚೆಲುವ್ಯಾನಟ್ಟಿ, ಮಾಳೇನಟ್ಟಿ, ಅತಿವಾಡ, ಬೋಡಕ್ಯಾನಟ್ಟಿ, ಕುರಿಹಾಳ, ಕಟ್ಟಣಭಾವಿ, ನಿಂಗ್ಯಾನಟ್ಟಿ, ಗುರಾಮಟ್ಟಿ, ಹಳೆಇದ್ದಲಹೊಂಡ, ಶಿವಾಪೂರ, ಪರಶ್ಯಾನಟ್ಟಿ, ದಾಸರವಾಡಿ, ಕೆಂಟ್ಯಾನಟ್ಟಿ, ಸೋನಟ್ಟಿ, ಕಾಕತಿ, ಕಂಗ್ರಾಳಿ ಬಿ.ಕೆ, ಬೈಲೂರ, ಹೆಗ್ಗೇರಿ, ಹುಲ್ಯಾನೂರ, ಬುಡ್ಯಾನೂರ, ಧರನಟ್ಟಿ, ಭರನಟ್ಟಿ, ಗೌಂಡವಾಡ, ಕಡೋಲಿ, ಅಗಸಗಾ ಹಾಗೂ ಜಾಫರವಾಡಿ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ದಿನಾಂಕ: 15.06.2025 ರಂದು ಬೆಳಿಗ್ಗೆ 9 ರಿಂದ ಸಾಯಂಕಾಲ 4 ಘಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.