*ಮಾರ್ಚ್ 22 ರಂದು ವಿದ್ಯುತ್ ವ್ಯತ್ಯಯ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕ.ವಿ.ಪ್ರ.ನಿ.ನಿ. ವತಿಯಿಂದ ನಾಲ್ಕನೇಯ ತ್ರೈಮಾಸಿಕ ಹಾಗೂ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಮಾ. 22 ರಂದು ಬೆಳಗ್ಗೆ 9 ಘಂಟೆಯಿಂದ ಸಂಜೆ 6 ಘಂಟೆಯವರೆಗೆ 110 ಕೆ.ವಿ. ಹಿರೇಬಾಗೇವಾಡಿ ಉಪಕೇಂದ್ರದಿಂದ ಸರಬರಾಜು ಆಗುವ ಬೆಳಗಾವಿ ತಾಲೂಕಿನ ಮುತ್ನಾಳ, ವಿರಕನಕೊಪ್ಪ, ಅರಳಿಕಟ್ಟಿ, ಬಸಾಪೂರ, ಹಿರೇಬಾಗೇವಾಡಿ, ಬೆಂಡಿಗೇರಿ, ಗಜಪತಿ, ಅಂಕಲಗಿ, ಹುಲಿಕವಿ, ಕೆ. ಕೆ. ಕೊಪ್ಪ, ಕಲಾರಕೊಪ್ಪ, ಸಿದ್ದನಹಳ್ಳಿ, ಬಡಕೊಳ್ಳಮಠ, ಹಲಗಿಮರ್ಡಿ, ನಾಗೇನಟ್ಟಿ, ನಾಗೇರಹಾಳ, ಬಡಸ, ನಂದಿಹಳ್ಳಿ ಹಾಗೂ ಕುಕಡೊಳ್ಳಿ ಗ್ರಾಮಗಳಿಗೆ ಹಾಗೂ ಖಾನಾಪೂರ ತಾಲೂಕಿನ ಹಿರೇಹಟ್ಟಿಹೊಳಿ, ಗಾಡಿಕೊಪ್ಪ, ಹಾಗೂ ಪಾರಿಶ್ವಾಡ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹುವಿಸಕಂನಿ ಬೆಳಗಾವಿ ಕಾ ಮತ್ತು ಪಾ ಗ್ರಾಮೀಣ ವಿಭಾಗ ಕಾರ್ಯನಿರ್ವಾಹಕ ಇಂಜಿನೀಯರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




