*ಪರಿವರ್ತನ ಪುನರ್ವಸತಿ ಮತ್ತು ವ್ಯಸನಮುಕ್ತಿ ಘಟಕ ಉದ್ಘಾಟಿಸಿದ ಪ್ರಭಾಕರ ಕೋರೆ*

ಪ್ರಗತಿವಾಹಿನಿ ಸುದ್ದಿ: ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರು ಬೆಳಗಾವಿಗ ಯಳ್ಳೂರ ರಸ್ತೆಯಲ್ಲಿನ ಕೆಎಲ್‌ಇ ಸಿಸಿ ಆಸ್ಪತ್ರೆಯಲ್ಲಿ ‘ಪರಿವರ್ತನ’ ಪುನರ್ವಸತಿ ಮತ್ತು ವ್ಯಸನಮುಕ್ತಿ ಘಟಕವನ್ನು ಉದ್ಘಾಟಿಸಿದರು.
ಉತ್ತರ ಕರ್ನಾಟಕದ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿರುವ ಅತ್ಯಾಧುನಿಕ ವಿಶೇಷ ಸೌಲಭ್ಯವಾದ ‘ಪರಿವರ್ತನ ಪುನರ್ವಸತಿ ಮತ್ತು ವ್ಯಸನಮುಕ್ತಿ ಕೇಂದ್ರ’ವನ್ನು ಬೆಳಗಾವಿಯ ಯಳ್ಳೂರು ರಸ್ತೆಯಲ್ಲಿರುವ ಕೆಎಲ್‌ಇ ಸೆಂಟೆನರಿ ಚಾರಿಟೇಬಲ್ ಆಸ್ಪತ್ರೆ ಆವರಣದಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಯಿತು.
ಈ ಕೇಂದ್ರವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆಎಲ್‌ಇ ಸಂಸ್ಥೆಯ ಗೌರವಾಧ್ಯಕ್ಷರು ಹಾಗೂ ಕಾಹೇರ್ (ಏಂಊಇಖ) ಕುಲಾಧಿಪತಿಗಳು ಹಾಗೂ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರು ಉದ್ಘಾಟಿಸಿದರು. ಸಮಗ್ರ ಮಾನಸಿಕ ಆರೋಗ್ಯ ಮತ್ತು ಪುನರ್ವಸತಿಯ ತುರ್ತು ಅಗತ್ಯತೆ ಸಮಾಜದ ಮುಖ್ಯವಾಹಿನಿಗೆ ವ್ಯಕ್ತಿಗಳನ್ನು ಮರಳಿ ತರುವ ಉದ್ದೇಶದಿಂದ ವಿಶೇಷ ಕೇಂದ್ರವನ್ನು ಸ್ಥಾಪಿಸಿರುವ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಕಾರ್ಯವನ್ನು ಅವರು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಯಾಗಿ ಆಗಮಿಸಿದ್ದ ಬೆಳಗಾವಿ ನಗರದ ಉಪ ಪೊಲೀಸ್ ಆಯುಕ್ತರು ಮಾತನಾಡಿ, ಸಮಾಜದಲ್ಲಿ ಹೆಚ್ಚುತ್ತಿರುವ ಮದ್ಯಪಾನ ಹಾಗೂ ಮಾದಕ ವಸ್ತುಗಳ ವ್ಯಸನವು ವ್ಯಕ್ತಿಯ ಜೀವನ ಮಾತ್ರವಲ್ಲದೆ ಅವರ ಕುಟುಂಬದ ಮೇಲೆಯೂ ಗಂಭೀರ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.
ವ್ಯಸನಕ್ಕೊಳಗಾದ ವ್ಯಕ್ತಿಗಳ ಅಸಹಜ ಹಾಗೂ ಹಿಂಸಾತ್ಮಕ ವರ್ತನೆಯಿಂದ ಕುಟುಂಬ ಸದಸ್ಯರು ಮಾನಸಿಕ, ಸಾಮಾಜಿಕ ಹಾಗೂ ಆರ್ಥಿಕ ಸಂಕಷ್ಠಗಳನ್ನು ಎದುರಿಸಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಕುಟುಂಬದವರ ಮೇಲೆ ಹಲ್ಲೆ, ಗೃಹಹಿಂಸೆ, ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಸೇರಿದಂತೆ ಗಂಭೀರ ಸಾಮಾಜಿಕ ಸಮಸ್ಯೆಗಳು ಉಂಟಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಯು.ಎಸ್.ಎಂ ಕೆ.ಎಲ್.ಇ ನಿರ್ದೇಶಕರಾದ ಡಾ.ಎಚ್.ಬಿ ರಾಜಾಶೇಖರ ಅವರು ಈ ಸಂದರ್ಭದಲ್ಲಿ ಅವರು ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸಲು ಹಾಗೂ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಪುನರ್ವಸತಿ ಸೇವೆಗಳು ಅತ್ಯಂತ ಮಹತ್ವದ್ದಾಗಿವೆ ಎಂದು ತಿಳಿಸಿದರು. 30 ದಿನಗಳ ವಸತಿ ಆಧಾರಿತ ಈ ಕಾರ್ಯಕ್ರಮದಲ್ಲಿ ತರಬೇತಿ ಪಡೆದ ಮನೋಶಾಸ್ತçಜ್ಞಗಳು ಮತ್ತು ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತರಿಂದ ಸಮಾಲೋಚನೆ, ಪ್ರತಿದಿನ ಮನೋವೈದ್ಯರ ಭೇಟಿ, ಯೋಗ ಮತ್ತು ಧ್ಯಾನ, ೨೪/೭ ನರ್ಸ್ ಸೇವೆ, ಪೌಷ್ಟಿಕ ಆಹಾರ ವ್ಯವಸ್ಥೆ, ವಿವಿಧ ಚಿಕಿತ್ಸಾ ಅವಧಿಗಳು, ಕುಟುಂಬ ಸಮಾಲೋಚನೆ ಹಾಗೂ ಮನರಂಜನಾ ಚಿಕಿತ್ಸೆಯಂತಹ ಅನೇಕ ಸೇವೆಗಳು ಒಳಗೊಂಡಿವೆ ಎಂದು ತಿಳಿಸಿದರು.
ಆಸ್ಪತ್ರೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಎನ್. ಅವರು ಮಾತನಾಡಿ, ಕೆಎಲ್‌ಇ ಸೆಂಟಿನರಿ ಚಾರಿಟೇಬಲ್ ಆಸ್ಪತ್ರೆಯು ಸದಾ ಸಮಾಜದ ಆರೋಗ್ಯ ಮತ್ತು ಕಲ್ಯಾಣಕ್ಕೆ ಆದ್ಯತೆ ನೀಡುತ್ತಿದ್ದು, ವ್ಯಸನಮುಕ್ತಿ ಮತ್ತು ಪುನರ್ವಸತಿ ಸೇವೆಗಳ ಅಗತ್ಯತೆಯನ್ನು ಮನಗಂಡು “ಪರಿವರ್ತನ” ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಹೇಳಿದರು. ಮದ್ಯ ಹಾಗೂ ಮಾದಕ ವಸ್ತುಗಳ ವ್ಯಸನವು ಕೇವಲ ವ್ಯಕ್ತಿಯ ಆರೋಗ್ಯವನ್ನಷ್ಠೆ ಅಲ್ಲದೆ ಕುಟುಂಬ ಮತ್ತು ಸಮಾಜದ ನೆಮ್ಮದಿಯನ್ನೂ ಹಾಳು ಮಾಡುತ್ತದೆ. ವ್ಯಸನಪೀಡಿತರಿಗೆ ಗುಣಮಟ್ಟದ ಚಿಕಿತ್ಸೆ, ಸಮಾಲೋಚನೆ, ಪುನರ್ವಸತಿ ಹಾಗೂ ಜೀವನ ಕೌಶಲ್ಯ ತರಬೇತಿಯನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಕೆಎಲ್‌ಇ ಸಿಸಿ ಆಸ್ಪತ್ರೆಯ ಮೂಲ ಧ್ಯೇಯದ ಭಾಗವಾಗಿ, ‘ಪರಿವರ್ತನ’ ಅತ್ಯುತ್ತಮ ವೈದ್ಯಕೀಯ ಸೇವೆಗಳನ್ನು ಕೈಗೆಟುಕುವ ಹಾಗೂ ಸಮುದಾಯ ಕೇಂದ್ರಿತ ಸೇವೆಗಳೊಂದಿಗೆ ಸಂಯೋಜಿಸಿ, ಎಲ್ಲ ರೋಗಿಗಳಿಗೆ ಯಾವುದೇ ಕಳಂಕವಿಲ್ಲದ ವಾತಾವರಣವನ್ನು ಒದಗಿಸಲಿದೆ. ಅನುಭವಸಂಪನ್ನ ಮನೋವೈದ್ಯರು, ಮನೋಶಸ್ತçಜ್ಞಗಳು ಹಾಗೂ ಸಾಮಾಜಿಕ ಕಾರ್ಯಕರ್ತರ ಬಹುಶಾಖಾ ವೈದ್ಯಕೀಯ ತಂಡದ ನೇತೃತ್ವವನ್ನು ಡಾ. ಆಂಟೋನಿಯೊ ಕಾರ್ವಾಲ್ಹೊ ಅವರು ವಿವರಿಸಿದರು.
ಈ ಸಂದರ್ಬದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಸಂಜಯ ಕಂಬಾರ ಅವರು ‘ಪರಿವರ್ತನ’ ವ್ಯಸನವನ್ನು ನೈತಿಕ ವೈಫಲ್ಯವಾಗಿ ಅಲ್ಲ, ಚಿಕಿತ್ಸೆ ನೀಡಬಹುದಾದ ವೈದ್ಯಕೀಯ ಸ್ಥಿತಿಯಾಗಿ ಪರಿಗಣಿಸುತ್ತದೆ. ಈ ಕೇಂದ್ರದಲ್ಲಿ ಸುರಕ್ಷಿತ ವೈದ್ಯಕೀಯ ಡಿಟಾಕ್ಸಿಫಿಕೇಶನ್ (ಮುಕ್ತಗೊಳಿಸುವಿಕೆ), ವೈಜ್ಞಾನಿಕ ಆಧಾರಿತ ಮನೋಸಮಾಲೋಚನೆ, ಕುಟುಂಬ ಚಿಕಿತ್ಸೆ, ದೀರ್ಘಕಾಲೀನ ಮರುಚಟ ತಡೆ ಕಾರ್ಯಕ್ರಮಗಳು ಸೇರಿದಂತೆ ವಿವಿಧ ವಿಶೇಷ ಸೇವೆಗಳು ಒಂದೇ ಸೂರಿನಡಿ ಲಭ್ಯವಿರುತ್ತವೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವೈದ್ಯಕೀಯ ಮತ್ತು ವೈದ್ಯಕೀಯೇಂತರ ಸಿಬ್ಬಂದಿ ಮತ್ತು ನರ್ಸಿಂಗ್ ವಿಧ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಡಾ. ಸಂಜೀವಿನಿ ರಾಠೋಡ ಅವರು ನಿರೂಪಿಸಿದರು. ಮತ್ತು ಡಾ. ಅಶ್ವಿವಿನಿ ಪದ್ಮಶಾಲಿ ಅವರು ವಂದಿಸಿದರು.
Padma Shri Dr. Prabhakar Kore Inaugurates ‘Parivartan’ Rehabilitation & De-addiction Unit at KLE Centenary Charitable Hospital, Belagavi
A state-of-the-art specialized facility, “Parivartan Rehabilitation and De-addiction Centre,” marking a significant milestone in the healthcare sector of North Karnataka, was officially inaugurated at the KLE Centenary Charitable Hospital campus on Yellur Road, Belagavi. The centre was inaugurated by Padma Shri Dr. Prabhakar Kore, Honorary President of KLE Society and Chancellor of KAHER, who attended the event as the chief guest.
Dr. Prabhakar Kore sir appreciated the efforts of the Department of Psychiatry in establishing this specialized centre to address the urgent need for comprehensive mental health and rehabilitation infrastructure, with the objective of helping individuals reintegrate into mainstream society.
Speaking at the event, the Deputy Commissioner of Police, Belagavi City, highlighted that the growing problem of alcohol and substance abuse in society has serious consequences not only for individuals but also for their families. He noted that abnormal and violent behaviour among addicted individuals often causes psychological, social, and financial hardships for family members. In some cases, it leads to assaults on family members, domestic violence, and abuse of women and children, creating grave social concerns.
Dr. H.B. Rajashekhar, Director of USM KLE, stated that rehabilitation services play a crucial role in improving patients’ quality of life and helping them become self-reliant. He explained that the 30-day residential program includes counseling by trained psychologists and psychiatric social workers, daily psychiatric consultations, yoga and meditation, 24/7 nursing care, nutritious meals, various therapeutic sessions, family counseling, and recreational therapy.
Addressing the gathering, Mr. Navin N., Chief Operating Officer of the hospital, said that KLE Centenary Charitable Hospital has always prioritized community health and well-being. Recognizing the increasing need for de-addiction and rehabilitation services, the hospital launched the “Parivartan” centre. He emphasized that alcohol and drug addiction not only affect an individual’s health but also disrupt the peace and stability of families and society. The centre aims to provide quality treatment, counseling, rehabilitation, and life-skills training under one roof.
As part of the hospital’s core mission, “Parivartan” will combine excellent medical care with affordable, community-focused services and provide a stigma-free environment for all patients. Dr. Antonio Carvalho explained that the centre will be led by a multidisciplinary team comprising experienced psychiatrists, psychologists, and social workers.
On this occasion, Dr. Sanjay Kambar, Medical Superintendent of the hospital, stated that “Parivartan” views addiction not as a moral failure but as a treatable medical condition. The centre will offer a range of specialized services under one roof, including safe medical detoxification, evidence-based psychotherapy, family therapy, and long-term relapse prevention programs.
Medical and non-medical staff members, along with nursing students, participated in the event. The program was compered by Dr. Sanjeevini Rathod, and the vote of thanks was delivered by Dr. Ashwini Padmashali.
पद्मश्री डॉ. प्रभाकर कोरे यांच्या हस्ते बेळगाव येथील KLE CC रुग्णालयात ‘परिवर्तन’ पुनर्वसन व व्यसनमुक्ती केंद्राचे उद्घाटन
उत्तर कर्नाटकातील आरोग्य क्षेत्रातील एक महत्त्वाचा टप्पा ठरणारे अत्याधुनिक आणि विशेष सुविधा असलेले ‘परिवर्तन पुनर्वसन व व्यसनमुक्ती केंद्र’ याचे अधिकृत उद्घाटन बेळगावच्या यळ्ळूर रोडवरील KLE सेंचेनरी चॅरिटेबल हॉस्पिटलच्या परिसरात करण्यात आले. या केंद्राचे उद्घाटन प्रमुख पाहुणे म्हणून उपस्थित असलेले पद्मश्री डॉ. प्रभाकर कोरे, KLE संस्थेचे मानद अध्यक्ष तसेच KAHER चे कुलाधिपती यांच्या हस्ते झाले.
समाजातील व्यक्तींना पुन्हा मुख्य प्रवाहात आणण्यासाठी सर्वसमावेशक मानसिक आरोग्य आणि पुनर्वसन सुविधांची तातडीची गरज ओळखून रुग्णालयाच्या मानसोपचार विभागाने स्थापन केलेल्या या विशेष केंद्राच्या कार्याचे डॉ. कोरे यांनी कौतुक केले.
कार्यक्रमात मान्यवर पाहुणे म्हणून उपस्थित असलेल्या बेळगाव शहराच्या उपपोलीस आयुक्तांनी सांगितले की, समाजात वाढत चाललेले मद्यपान व अंमली पदार्थांचे व्यसन केवळ व्यक्तीच्या जीवनावरच नव्हे तर त्यांच्या कुटुंबावरही गंभीर परिणाम करत आहे. व्यसनाधीन व्यक्तींच्या असामान्य व हिंसक वर्तनामुळे कुटुंबीयांना मानसिक, सामाजिक आणि आर्थिक अडचणींचा सामना करावा लागतो. काही प्रकरणांमध्ये कुटुंबीयांवर हल्ले, घरगुती हिंसा, महिला व मुलांवरील अत्याचार यांसारख्या गंभीर सामाजिक समस्या निर्माण होत असल्याची चिंताजनक बाब त्यांनी अधोरेखित केली.
यू.एस.एम. KLE चे संचालक डॉ. एच. बी. राजाशेखर यांनी सांगितले की, रुग्णांच्या जीवनमानात सुधारणा घडवून त्यांना स्वावलंबी बनविण्यासाठी पुनर्वसन सेवा अत्यंत महत्त्वपूर्ण आहेत. ३० दिवसांच्या निवासी कार्यक्रमात प्रशिक्षित मानसशास्त्रज्ञ व मनोरुग्ण सामाजिक कार्यकर्त्यांकडून समुपदेशन, दररोज मानसोपचार तज्ज्ञांची भेट, योग व ध्यान, २४x७ नर्सिंग सेवा, पौष्टिक आहार, विविध उपचार सत्रे, कौटुंबिक समुपदेशन आणि मनोरंजनात्मक उपचार अशा अनेक सेवांचा समावेश आहे.
रुग्णालयाचे मुख्य कार्यकारी अधिकारी श्री. नवीन एन. यांनी सांगितले की, KLE सेंचेनरी चॅरिटेबल हॉस्पिटलने नेहमीच समाजाच्या आरोग्य व कल्याणाला प्राधान्य दिले आहे. व्यसनमुक्ती आणि पुनर्वसन सेवांची वाढती गरज लक्षात घेऊन “परिवर्तन” केंद्राची स्थापना करण्यात आली आहे. मद्य व अंमली पदार्थांचे व्यसन केवळ व्यक्तीच्या आरोग्यावरच नव्हे तर कुटुंब आणि समाजाच्या शांततेवरही परिणाम करते. व्यसनाधीन व्यक्तींना दर्जेदार उपचार, समुपदेशन, पुनर्वसन आणि जीवनकौशल्य प्रशिक्षण एकाच छताखाली उपलब्ध करून देण्याच्या उद्देशाने हे केंद्र सुरू करण्यात आले आहे.
KLE CC रुग्णालयाच्या मूलभूत ध्येयाचा एक भाग म्हणून, ‘परिवर्तन’ केंद्र उत्कृष्ट वैद्यकीय सेवा, परवडणाऱ्या व समुदाय-केंद्रित सुविधांसह सर्व रुग्णांना कलंकमुक्त (Stigma-Free) वातावरण उपलब्ध करून देणार आहे. अनुभवी मानसोपचार तज्ज्ञ, मानसशास्त्रज्ञ आणि सामाजिक कार्यकर्त्यांच्या बहुविद्याशाखीय वैद्यकीय पथकाच्या नेतृत्वाबाबत डॉ. अँटोनिओ कार्वाल्हो यांनी माहिती दिली.
यावेळी रुग्णालयाचे वैद्यकीय अधीक्षक डॉ. संजय कांबळे यांनी सांगितले की, “परिवर्तन” केंद्र व्यसनाकडे नैतिक अपयश म्हणून नव्हे तर उपचारयोग्य वैद्यकीय स्थिती म्हणून पाहते. येथे सुरक्षित वैद्यकीय डिटॉक्सिफिकेशन (व्यसनमुक्ती प्रक्रिया), वैज्ञानिक पद्धतीवर आधारित मानसोपचार समुपदेशन, कौटुंबिक उपचार आणि दीर्घकालीन पुनर्व्यसन प्रतिबंध कार्यक्रमांसह विविध विशेष सेवा एकाच ठिकाणी उपलब्ध असतील.
या कार्यक्रमाला वैद्यकीय व प्रशासकीय कर्मचारी तसेच नर्सिंग विद्यार्थी मोठ्या संख्येने उपस्थित होते. कार्यक्रमाचे सूत्रसंचालन डॉ. संजीविनी राठोड यांनी केले, तर डॉ. अश्विनी पद्मशाली यांनी आभार प्रदर्शन केले.


