Kannada NewsLatest

ಆಲೂ ಬೆಳೆಗಾರರ ಪರ ಧ್ವನಿ ಎತ್ತಿದ ಪ್ರಭಾಕರ ಕೋರೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ – 

ಆಲೂಗಡ್ಡೆ ಬೆಳೆಗಾರರ ಪರವಾಗಿ ಧ್ವನಿ ಎತ್ತಿದ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಕೇಂದ್ರ ಆಹಾರ ಸಂಸ್ಕರಣ ಉದ್ಯಮ ಸಚಿವ ರಾಮೇಶ್ವರ ತೇಲಿ ಅರಿಂದ ಉತ್ತರ ಪಡೆದಿದ್ದಾರೆ.

ಆಲೂಗಡ್ಡೆಗಳ ದರ ಕುಸಿತದ ಸಂದರ್ಭದಲ್ಲಿ ಶೀಥಲಿಕರಣ ಕೇಂದ್ರದಲ್ಲಿ ಸಂಗ್ರಹಿಸಿಟ್ಟಿದ್ದ ಆಲೂಗಡ್ಡೆಯನ್ನು ರೈತರು ವಾಪಸ್ ಪಡೆಯಲೂ ಬಾರದ ಸಂದರ್ಭಗಳಿವೆ. ಅದನ್ನು ತೆಗೆದುಕೊಂಡು ಹೋಗುವ ವೆಚ್ಚ ಕೂಡ ಮಾರಾಟ ಮಾಡಿದರೆ ಸಿಗುವುದಿಲ್ಲ ಎನ್ನುವ ಸ್ಥಿತಿ ಕೆಲವೊಮ್ಮೆ ಬರುತ್ತಿದೆ.

ಈ ವಿಷಯ ಕೆಂದ್ರ ಸರಕಾರದ ಗಮನಕ್ಕೆ ಬಂದಿದೆಯೇ? ಬಂದಿದ್ದರೆ ಆಲೂಗಡ್ಡೆ ಬೆಲೆಯ ಮೇಲೆ ಪರಿಣಾಮ ಬೀರುವ ಅಂಶಗಳೇನು ಮತ್ತು  ಕೇಂದ್ರ ಸರಕಾರ ರೈತರ ರಕ್ಷಣೆಗಾಗಿ ತೆಗೆದುಕೊಂಡಿರುವ ಕ್ಕಮಗಳೇನು ಎಂದು ಕೋರೆ ಪ್ರಶ್ನಿಸಿದ್ದರು.

ಇಂತಹ ಪ್ರಸಂಗ ನಡೆಯುತ್ತಿರುವುದ ನಿಜವಾಗಿದೆ. ಬಟಾಟೆ ಬೆಲೆ ಕಡಿಮೆಯಾಗಲು ಬೆಳೆಯ ಪ್ರಮಾಣ ಹೆಚ್ಚಾಗುವುದು, ಅವುಗಳ ಸಂಸ್ಕರಣೆ ಘಟಕಗಳ ಕೊರತೆ, ರಫ್ತಿಗೆ ಅವಕಾಶವಾಗದಿರುವುದು ಮೊದಲಾದ ಕಾರಣಗಳಿವೆ.

ಈ ಹಿನ್ನೆಲೆಯಲ್ಲಿ ಟೊಮೇಟೋ, ಈರುಳ್ಳಿ ಮತ್ತು ಆಲೂಗಡ್ಡೆ (Tomato, Onion, Potato – TOP) ಬೆಳೆಗಾರರ ನೆರವಿಗೆ 2018-19ರ ಆಯವ್ಯಯದಲ್ಲಿ ಸರಕಾರ ಕ್ರಮ ತೆಗೆದುಕೊಂಡಿದೆ. ಇದಕ್ಕಾಗಿ 500 ಕೋಟಿ ರೂ. ಮೀಸಲಿಡಲಾಗಿದೆ.

3 ವರ್ಷದ ಮಾರುಕಟ್ಟೆ ಸರಾಸರಿ ಬೆಲೆಗಿಂತ ಕುಸಿದಲ್ಲಿ ಅಂತಹ ಸಂದರ್ಭದಲ್ಲಿ ರೈತರಿಗೆ ಶೇ| 50ರಷ್ಟು ಸಾಗಾಣಿಕೆ ವೆಚ್ಚ ಮತ್ತು ಶೀಥಲೀಕರಣ ಕೇಂದ್ರದಲ್ಲಿ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿದೆ.ಇದನ್ನು ನೋಡಿಕೊಳ್ಳಲು ಎನ್ಎಎಫ್ಇಡಿ ಎನ್ನುವ ನೋಡಲ್ ಏಜನ್ಸಿಗೆ ಜವಾಬ್ದಾರಿ ನೀಡಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button