Kannada NewsKarnataka NewsPolitics

ಮುಂಬೈ ಪ್ರವಾಸದಲ್ಲಿದ್ದ ಪ್ರಭು ಚವ್ಹಾಣ್ ಆರೋಗ್ಯದಲ್ಲಿ ಏರುಪೇರು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಭಗವಂತ ಖೂಬಾಗೆ ಟಿಕೆಟ್ ಘೋಷಣೆ ಹಿನ್ನೆಲೆಯಲ್ಲಿ ಶಾಕ್ ಗೆ ಒಳಗಾಗಿರುವ ಮಾಜಿ ಸಚಿವ ಪ್ರಭು ಚವ್ಹಾಣ್ ಮುಂಬೈಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಎದೆಬಡಿತ ಹೆಚ್ಚಾಗಿ ಮುಂಬೈ ಪ್ರವಾಸದಲ್ಲಿದ್ದ ಪ್ರಭುಚವ್ಹಾಣ್ ಗೆ ಆರೋಗ್ಯದಲ್ಲಿ ಏರುಪೇರಾಗಿದೆ. ಮುಂಬೈನ ಬಾಂದ್ರಾದಲ್ಲಿರುವ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಕಿರುಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ.

ಡಾ.ಎಸ್ ಲೋಖಂಡವಾಲಾ ನೇತೃತ್ವದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿದ್ದು, ಸದ್ಯ ಆರೋಗ್ಯದಲ್ಲಿ ಸ್ಥಿರತೆ ಇದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

*ಭಗವಂತ ಖೂಬಾಗೆ ಟಿಕೆಟ್ ನೀಡದಂತೆ ಭಾರೀ ಹೋರಾಟ ನಡೆಸಿದ್ಧ ಚವ್ಹಾಣ್, ತನ್ನನ್ನು ಸೋಲಿಸಲು ಖೂಬಾ ಯತ್ನಿಸಿದ್ದರು ಎಂದು ಸಾರ್ವಜನಿಕವಾಗಿ ಗಳಗಳ ಅತ್ತಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾಲಿಗೆ ಸಾರ್ವಜನಿಕ ವೇದಿಕೆಯಲ್ಲೇ ಸಾಷ್ಟಾಂಗ ನಮಸ್ಕಾರ ಹಾಕಿ ಖೂಬಾಗೆ ಟಿಕೆಟ್ ನೀಡದಂತೆ ಮನವಿ ಮಾಡಿದ್ದರು.

Home add -Advt

ಖೂಬಾಗೆ ಟಿಕೆಟ್ ತಪ್ಪಿಸಲು ಯಾವ ಹೋರಾಟವುೂ ಫಲ ನೀಡದ್ದರಿಂದ ಮಾನಸಿಕ ಆಘಾತಕ್ಕೆ ಒಳಗಾದರಾ‌ ಪ್ರಭು ಚವ್ಹಾಣ್ ಎನ್ನುವ ಪ್ರಶ್ನೆ ಮೂಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button