Karnataka NewsLatestPolitics

*ಅಶ್ಲೀಲ ವಿಡಿಯೋ ರವಾನಿಸಿ ಶಾಸಕ ಪ್ರಭು ಚೌವ್ಹಾಣ್ ಗೆ ಬೆದರಿಕೆ: ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಶಾಸಕ ಪ್ರಭು ಚೌವ್ಹಾಣ್ ಅವರಿಗೆ ಅಶ್ಲೀಲ ವಿಡಿಯೋ ಕಳುಹಿಸಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ನಂದಿಬಿಜಲಗಾಂವ್ ತಾಂಡಾದ ನಿವಾಸಿ ವಿಕಾಸ್ ಪವಾರ್ ಬಂಧಿತ ಆರೋಪಿ. ಈತನನ್ನು ಹೈದರಾಬಾದ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.

Home add -Advt

ವಿಕಾಸ್, ಪ್ರಭು ಚೌವ್ಹಾಣ್ ಅವರಿಗೆ ಪ್ರಭು ಚೌವ್ಹಾಣ್ ಹಾಗೂ ಯುವತಿಯೊಬ್ಬಳ ಫೋಟೋ ಇರುವ ಎಡಿಟ್ ಮಾಡಿದ್ದ ವಿಡಿಯೋ ಕಳುಹಿಸಿ 30 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದರೆ ವಿಡಿಯೋ ಯೂಟ್ಯೂಬ್ ಗೆ ಅಪ್ ಲೋಡ್ ಮಾಡುವುದಾಗಿ ಬೆದರಿಸಿದ್ದ. ಈ ಬಗ್ಗೆ ಹೊಕ್ರಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


Related Articles

Back to top button