
ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಕಾಲು ಜಾರಿ ಬಿದ್ದ ಪರಿಣಾಮ ಪ್ರದೀಪ್ ಈಶ್ವರ್ ಅವರ ಬಲಗಾಲಿಗೆ ಗಂಭೀರ ಗಾಯವಾಗಿದ್ದು, ವೈದ್ಯರು 6 ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.
ಈ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನೆಪಗಳನ್ನಲ್ಲ, ಕೆಲಸವನ್ನು ಮಾಡಿ ತೋರಿಸುವುದು – ಇದನ್ನೇ ನಾನು ನಂಬುತ್ತೇನೆ!
ಕೆಲವು ದಿನಗಳ ಹಿಂದೆ ನಾನು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದೆ. ವೈದ್ಯರು ನನಗೆ ಆರು ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಲು ಸಲಹೆ ನೀಡಿದರು. ಆದರೆ, ನನ್ನೊಳಗಿರುವ ಶಿಕ್ಷಕ ಮತ್ತು ಆಡಳಿತಗಾರ ಸುಮ್ಮನೆ ಕೈಕಟ್ಟಿ ಕೂರಲು ಒಪ್ಪಲಿಲ್ಲ.
ಕೆಲಸ ಆಗಲೇಬೇಕೆಂದಿದ್ದರೆ, ಅದಕ್ಕೆ ದಾರಿ ಕಂಡುಕೊಳ್ಳಲೇಬೇಕು! ಹಾಗಾಗಿ, ನಾವು ತರಗತಿಯ ಒಳಗಡೆಯೇ ಹಾಸಿಗೆಯನ್ನು ಸಿದ್ಧಪಡಿಸಿಕೊಂಡಿದ್ದೇವೆ. ಇಲ್ಲಿಂದಲೇ ನಾನು ನನ್ನ ವಿದ್ಯಾರ್ಥಿಗಳೊಂದಿಗೆ ತೊಡಗಿಸಿಕೊಂಡಿದ್ದೇನೆ ಮತ್ತು ಅದೇ ಸಮಯದಲ್ಲಿ ನನ್ನ ಕ್ಷೇತ್ರಕ್ಕೆ ಸಂಬಂಧಿಸಿದ ಜವಾಬ್ದಾರಿಗಳನ್ನೂ ನಿರ್ವಹಿಸುತ್ತಿದ್ದೇನೆ.
ಪರಿಸ್ಥಿತಿಗಳು ನಿಮ್ಮ ವೇಗವನ್ನು ಕಡಿಮೆ ಮಾಡಬಹುದು, ಆದರೆ ನೀವು ನಂಬಿದ ಕೆಲಸವನ್ನು ಮಾಡುವುದರಿಂದ ಅವು ನಿಮ್ಮನ್ನು ತಡೆಯಲಾರವು. ಕಯಕವೇ ಕೈಲಾಸ… ಎಂದು ಬರೆದುಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




