ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಾರ್ಮಿಕರಿಗೆ ಅವರ ಸಂಧ್ಯಾಕಾಲದಲ್ಲಿ ದುಡಿದು ತಮ್ಮನ್ನು ಪೋಷಿಸಿಕೊಳ್ಳಲು ಆರ್ಥಿಕ ಮೂಲಗಳು ಇರುವುದಿಲ್ಲ, ಆದ್ದರಿಂದ ಕಾರ್ಮಿಕರಿಗೆ ಸಂಧ್ಯಾಕಾಲದಲ್ಲಿ ಸ್ವಯಂ ಸಾಮಾಜಿಕ ಭದ್ರತೆ ಕಲ್ಪಿಸಲು ಭಾರತ ಸರ್ಕಾರವು ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.
ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಶುಕ್ರವಾರ(ಮಾರ್ಚ್ ೧೧) ರಂದು ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಪಿಂಚಣಿ ಯೋಜನೆ ಸಪ್ತಾಯ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಪಿಂಚಣಿ ಯೋಜನೆಯು ದೇಶದ ಅಸಂಘಟಿತ ವಲಯ ಕಾರ್ಮಿಕರ ಪಿಂಚಣಿ ಯೋಜನೆಯಾಗಿದೆ. ಈ ಯೋಜನೆಗೆ ಒಳಪಡುವ ಕಾರ್ಮಿಕರು ೧೮ ರಿಂದ ೪೦ ವರ್ಷ ವಯೋಮಿತಿಯನ್ನು ಹೊಂದಿರಬೇಕು. ಅವರ ಮಾಸಿಕ ಆದಾಯ ೧೫೦೦೦ ಅಥವಾ ಅದಕ್ಕಿಂತ ಕಡಿಮೆ ಹೊಂದಿರಬೇಕು ಸ್ವಯಂ ಉದ್ಯೋಗಿಗಳ ವಾರ್ಷಿಕ ವಹಿವಾಟು ಗರಿ? ೧.೫೦ ಕೋಟಿ ರೂಪಾಯಿ ಒಳಗಿರಬೇಕು ಮತ್ತು ಆದಾಯ ತೆರಿಗೆಯನ್ನು ಪಾವತಿಸುವವರಾಗಿರಬಾರದು ಎಂದು ಅವರು ಹೇಳಿದರು.
ಈ ಯೋಜನೆಯಡಿ ವಂತಿಕೆದಾರರು ಮಾಹೆಯಾನ ಪಾವತಿಸಬೇಕಾದ ವಂತಿಕೆಯ ಅತ್ಯಂತ ಕಡಿಮೆ ಇದ್ದು, ಕನಿ? ೫೫ ರೂಪಾಯಿ ಹಾಗೂ ಗರಿ? ೨೦೦ ರೂಪಾಯಿ ಆಗಿರುತ್ತದೆ. ಕೇಂದ್ರ ಸರ್ಕಾರವು ವಂತಿಕೆದಾರರು ಮಾಹೆಯಾನ ಪಾವತಿಸುವ ವಂತಿಕೆಗೆ ಸಮಾನಾಂತರ ವಂತಿಕೆಯನ್ನು ಅವರವರ ಪಿಂಚಣಿ ಖಾತೆಗೆ ಪಾವತಿಸುತ್ತದೆ. ೬೦ ವ? ಪೂರ್ಣಗೊಂಡ ನಂತರ ವಂತಿಕೆದಾರರು ಅಂದರೆ ಪಲಾನುಭವಿಗಳು ತಿಂಗಳಿಗೆ ೩೦೦೦ ರೂಪಾಯಿಗಳು ಮಾಸಿಕ ಪಿಂಚಣಿಯನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದರು.
ಗೃಹ ಆಧಾರಿತ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಬಿಸಿಯೂಟ ಸಿದ್ದಪಡಿಸುವವರು, ಹಮಾಲಿಗಳು, ಇಟ್ಟಿಗೆ ಭಟ್ಟಿ ಕಾರ್ಮಿಕರು, ಚಮ್ಮಾರರು, ಚಿಂದಿ ಆಯುವವರು, ಮನೆ ಕೆಲಸದವರು, ಅಗಸರು, ರಿಕ್ಷಾ ಚಾಲಕರು, ಭೂರಹಿತ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಚರ್ಮೋದ್ಯಮದ ಕಾರ್ಮಿಕರು, ದ್ವನಿ ಮತ್ತು ದೃಶ್ಯ ಕಾರ್ಮಿಕರು ಮತ್ತು ಇತರೆ ಅಸಂಘಟತ ವಲಯದ ಎಲ್ಲ ಕಾರ್ಮಿಕರು ಈ ಯೋಜನೆಯ ಉಪಯೋಗವನ್ನು ಪಡೆಯಬೇಕು ಎಂದು ಹೆಳಿದರು.
ಈ ಯೋಜನೆ ಪ್ರಸ್ತುತ ಮಾರ್ಚ್ ೭ ರಿಂದ ಪ್ರಾರಂಭವಾಗಿದ್ದು ಮಾರ್ಚ್ ೧೫ ರೋಳಗೆ ಉತ್ತಮ ರೀತಿಯ ಫಲಿತಾಂಶ ಪಡೆಯಬೇಕು, ಗ್ರಾಮ ಓನ್ ಯೋಜನೆಯ ರೀತಿಯಲ್ಲಿ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಪಿಂಚಣಿ ಯೋಜನೆ ಜನ ಮನ್ನಣೆಯನ್ನು ಪಡೆಯಬೇಕು ಇದಕ್ಕೆ ಎಲ್ಲ ಇಲಾಖೆಯ ಅಧಿಕಾರಿಗಳು ಕೈಜೊಡಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ