ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು : ಇದು ಪ್ರಗತಿವಾಹಿನಿ ವರದಿಯ ಬಿಗ್ ಇಂಪ್ಯಾಕ್ಟ್. ವಿಕಲಚೇತನರಿಗೆ ಮಂಜೂರಾಗಿದ್ದ ಬೈಕ್ ಹಸ್ತಾಂತರಿಸಲು ತಿಂಗಳುಗಟ್ಟಲೆ ಸತಾಯಿಸುತ್ತಿದ್ದ ಅಧಿಕಾರಿಗಳು ಪ್ರಗತಿವಾಹಿನಯಲ್ಲಿ ವರದಿ ಪ್ರಕಟವಾದ ತಕ್ಷಣ ತಡಬಡಾಯಿಸಿ ಓಡಿ ಹೋಗಿ ಬೈಕ್ ವಿತರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿ ಗಮನಿಸಿದ ತಕ್ಷಣ ರಾತ್ರೋರಾತ್ರಿ ಶಾಸಕ ಮಹಾಂತೇಶ ದೊಡಗೌಡರ್ ಬೈಕ್ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ತಾಖೀತು ಮಾಡಿ, ತಾವೇ ಸ್ವತಃ ಮಂಗಳವಾರ ಬೆಳಗ್ಗೆ ವಿಕಲಚೇತನರ ಮನೆಗೆ ತೆರಳಿ ಬೈಕ್ ವಿತರಿಸುವ ವ್ಯವಸ್ಥೆ ಮಾಡಿಸಿದರು.
ಮಹಮ್ಮದ್ ಮನಿಯಾರ್ ಗೆ ಮಾತ್ರವಲ್ಲದೆ ಇನ್ನೋರ್ವ ವಿಕಲಚೇತನ ಫಲಾನುಭವಿಗೂ ಮಂಗಳವಾರ ಮೂರು ಗಾಲಿ ಬೈಕ್ ವಿತರಣೆ ಮಾಡಲಾಗಿದೆ.
ಪಟ್ಟಣದ ಮಹಮ್ಮದ ಮನಿಯಾರ ಹಾಗೂ ದುರ್ಗಪ್ಪ ಮನ್ನವಡ್ಡರ ಅವರಿಗೆ ಪಟ್ಟಣ ಪಂಚಾಯತ ಅಧಿಕಾರಿಗಳು ನೂತನ ಬೈಕ್ ಗಳನ್ನು ನೀಡಿದರು.
ಪಗ್ರತಿವಾಹಿನಿ ವರದಿಯ ಫಲಶೃತಿ
ಅಂಗವಿಕಲ ಮಹಮ್ಮಹದ್ ಮನಿಯಾರಗೆ ಬೈಕ್ ಮಂಜೂರಾದರೂ ಅಧಿಕಾರಿಗಳು ಬೈಕ್ ನೀಡದ ಕುರಿತು ಸೋಮವಾರ ರಾತ್ರಿ ಪ್ರಗತಿವಾಹಿನಿ ಸುದ್ದಿ (ಥೂ… ಇವರೆಂತಾ ನಿಷ್ಕರುಣಿ ಅಧಿಕಾರಿಗಳು? ) ಪ್ರಕಟಿಸಿತ್ತು. ವಿಕಲಚೇತನರಿಗೆ ಮಂಜೂರಾದ ಸಾಮಗ್ರಿ ಇಟ್ಟುಕೊಳ್ಳಲು ಅಧಿಕಾರಿಗಳಿಗೆ ಯಾವ ಅಧಿಕಾರವೂ ಇಲ್ಲ ಎಂದು ಕಟುವಾದ ಶಬ್ದಗಳಲ್ಲಿ ವರದಿ ಪ್ರಕಟಿಸಿ, ಮಂಗಳವಾರವೇ ಬೈಕ್ ವಿತರಿಸುವಂತೆ ತಾಖೀತು ಮಾಡಿತ್ತು.
ಸುದ್ದಿಗೆ ಎಚ್ಚೆತ್ತುಕೊಂಡ ಅಧಿಕಾರಿಗಳು, ಪಲಾನುಭವಿಗಳಿಗೆ ತಕ್ಷಣವೇ ಬೈಕ್ ವಿತರಿಸಿದರು.
ತಕ್ಷಣ ಸ್ಪಂದಿಸಿದ ಶಾಸಕರು :
ಪ್ರಗತಿವಾಹಿನಿಯಲ್ಲಿ ಸುದ್ದಿ ನೋಡಿದ ಶಾಸಕರು ರಾತ್ರೋರಾತ್ರಿ ಪ್ರಗತಿವಾಹಿನಿಗೆ ಕರೆ ಮಾಡಿ, ಮಂಗಳವಾರ ಬೆಳಗ್ಗೆಯೇ ಬೈಕ್ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.
ಮಂಗಳವಾಗ ಬೆಳಗ್ಗೆಯೇ ಪಲಾನುಭವಿಯಾದ ಮಹಮ್ಮದ ಮನಿಯಾರ್ ಮನೆಗೆ ತೆರಳಿ ಮಹಮ್ಮದನ ಅಳಲನ್ನು ಕೇಳಿದರು.
ತಕ್ಷಣ ಪಟ್ಟಣ ಪಂಚಾಯಿತಿ ಅಧಿಕಾರಿಗಳನ್ನು ಕರೆದು ಕೂಡಲೇ ಮೂರು ಗಾಲಿ ಬೈಕ್ ನೀಡಲು ಸೂಚಿಸಿದರು. ಜನರಿಗೆ ಯಾವುದೇ ರೀತಿ ತೊಂದರೆಯಾದರೆ ನೇರವಾಗಿ ನಮ್ಮ ಗಮನಕ್ಕೆ ತರಬೇಕು ಎಂದು ಜನರಿಗೆ ಹೇಳಿದರು.
ನಾನು ಕಳೆದ ಎರಡು ತಿಂಗಳಿನಿಂದ ಬೈಕ್ ಸಲುವಾಗಿ ಪರಡಾಡುತ್ತಿದ್ದೆ. ಇವತ್ತು ಪ್ರಗತಿವಾಹಿನಿಯಲ್ಲಿ ಸುದ್ದಿ ಬಂದ ತಕ್ಷಣ ಪಟ್ಟಣ ಪಂಚಾಯತ ಸಿಬ್ಬಂದಿ ಪೋನ್ ಮಾಡಿ, ಬೈಕ್ ವಿತರಿಸಿದರು. ಮತ್ತು ಶಾಸಕರು ಭೇಟಿಯಾಗಿ ನನಗೆ ಯಾವುದೇ ತೊಂದರೆ ಇದ್ದರೆ ತಿಳಿಸು ತಕ್ಷಣ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.-ಮಹಮ್ಮದ ಮನಿಯಾರ, ವಿಕಲಚೇತನ ಫಲಾನುಭವಿ
ಸೋಮವಾರ ರಾತ್ರಿ ಪ್ರಗತಿವಾಹಿನಿ ಪ್ರಕಟಿಸಿದ ವರದಿ –
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ