Kannada NewsPolitics

*ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಹರಿಹಾಯ್ದ ಪ್ರಹ್ಲಾದ ಜೋಷಿ*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಗೃಹ ಸಚಿವ ಅಮಿತ್​ ಶಾ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಪರಿವಾರ ಸಮೇತ ಭೇಟಿ ನೀಡಿ, ಶಾಹಿ ಸ್ನಾನ ಮಾಡಿದ್ದರು. ಅದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದರು. ಸದ್ಯ ಅವರ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದು, ಕೇಂದ್ರ ಸಚಿವ ಪ್ರಹ್ಲಾದ​ ಜೋಶಿ  ಕಿಡಿಕಾರಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಮಹಾಕುಂಭ ಹಿಂದೂಗಳ ಅತ್ಯಂತ ದೊಡ್ಡ ಧಾರ್ಮಿಕ, ಆಧ್ಯಾತ್ಮಿಕ ಉತ್ಸವ, ಇಡೀ ಜಗತ್ತೆ ಅತ್ಯಂತ ಭಕ್ತಿ, ನಂಬಿಕೆ, ಉತ್ಸಾಹದಿಂದ ಇದರಲ್ಲಿ ಪಾಲ್ಗೊಳ್ಳುತ್ತಿರುವಾಗ, ದಿನಕ್ಕೆ ಕೋಟ್ಯಾಂತರ ಜನರು ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನಮಾಡಿ ಪುನೀತರಾಗುತ್ತಿರುವಾಗ ಇದರಲ್ಲೂ ರಾಜಕೀಯ ಮಾಡುತ್ತಿರುವುದು ಯಾರ ಓಲೈಕೆಗಾಗಿ ಎಂದು ವಾಗ್ದಾಳಿ ಮಾಡಿದ್ದಾರೆ.

ಇಂತಹ ಕ್ಷುಲ್ಲಕ ಹೇಳಿಗೆ ನೀಡಿ ಹಿಂದೂ ಧಾರ್ಮಿಕ ಶ್ರದ್ಧೆ ಮತ್ತು ಕೋಟ್ಯಾಂತರ ಹಿಂದೂಗಳನ್ನು ಅವಮಾನಿಸಿದ್ದೀರಿ. ಪ್ರಧಾನಿ ಮೋದಿ ಜೀ ಹಾಗೂ ಅಮಿತ್ ಶಾ ಜೀ ಅವರ ಗಂಗಾ ನದಿಯ ತೀರ್ಥ ಸ್ನಾನದ ಕುರಿತು ನೀವು ಆಡಿದ ವ್ಯಂಗ್ಯದ ಮಾತುಗಳು ಸಮಸ್ತ ಹಿಂದೂಗಳ, ಅವರ ಭಾವನೆಗಳ, ಅವರ ಶೃದ್ಧೆಯನ್ನು ಅವಮಾನಿಸಿ ಆಡಿದ ಮಾತುಗಳು. ನಿಮ್ಮ ಹೇಳಿಕೆಗೆ ಕ್ಷಮೆ ಯಾಚನೆ ಮಾಡಿ. ಇಂಡಿಯಾ ಮೈತ್ರಿಕೂಟ ಸಮಸ್ತ ಸನಾತನ ಧರ್ಮದ ವಿರೋಧಿ ಎಂಬುವದು ಈ ಹೇಳಿಕೆಯಿಂದ ಮತ್ತೊಮ್ಮೆ ಸಾಬಿತಾಗಿದೆ ಎಂದು ಹರಿಹಾಯ್ದಿದ್ದಾರೆ. 

Home add -Advt

Related Articles

Back to top button