ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸದ ಎದುರು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಗರಗ ಗ್ರಾಮದ ಶ್ರೀದೇವಿ ಸಾವನ್ನಪ್ಪಿದ ಮಹಿಳೆ. ಏಪ್ರಿಲ್ 6ರಂದು ಶ್ರೀದೇವಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಕಳೆದ ವರ್ಷದ ಭೀಕರ ಪ್ರವಾಹದಿಂದಾಗಿ ಮಹಿಳೆ ಮನೆ ಸಂಪೂರ್ಣ ಕುಸಿದು ಬಿದ್ದಿತ್ತು. ಪರಿಹಾರದ ಭರವಸೆ ನಿಡಿದ್ದ ಸರ್ಕಾರದಿಂದ ಯಾವುದೆ ಪರಿಹಾರ ಸಿಗದೇ ಮಹಿಳೆ ಕಂಗೆಟ್ಟಿದ್ದಳು. ಪರಿಹಾರಕ್ಕಾಗಿ ಕಳೆದ 5 ತಿಂಗಳಿಂದ ಸರ್ಕಾರಿ ಕಚೇರಿಗಳಿಗೂ ಅಲೆದಾಡಿದ್ದಳು. ಶಾಸಕ ಮರೂತ ದೇಸಾಯಿ ಬಳಿಯೂ ಮನವಿ ಮಾಡಿದ್ದಳು. ಆದರೆ ಶಾಸಕರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿರಲಿಲ್ಲ.
ಇದರಿಂದ ಮನನೊಂದು ಮಹಿಳೆ ಹುಬ್ಬಳ್ಳಿಯ ಮಯೂರ್ ಎಸ್ಟೇಟ್ ನಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿವ ಅವರ ಮನೆ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ತಕ್ಷಣ ಮಹಿಳೆಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ