Latest

*ದಳಪತಿಗಳ ಕಾಲೆಳೆದ ಜೋಶಿ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಹಾಸನ ಕ್ಷೇತ್ರದ ಟಿಕೆಟ್ ಕಿತ್ತಾಟಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ದಳಪತಿಗಳಿಗೆ ವ್ಯಂಗ್ಯವಾಡಿದ್ದು, ಮನೆಯನ್ನೇ ನಿರ್ವಹಣೆ ಮಾಡಲು ಆಗದವರು ರಾಜ್ಯವನ್ನು ಹೇಗೆ ನಿರ್ವಹಣೆ ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಅವರು ಮೊದಲು ಮನೆ ಸರಿ ಮಾಡಿಕೊಳ್ಳಲಿ ಅನಂತರ ರಾಜ್ಯ ಆಳೋಕೆ ಬರಲಿ ಎಂದು ಹೇಳಿದ್ದಾರೆ.

ದಳಪತಿಗಳಿಗೆ ಮನೆಯವರೆಲ್ಲ ಎಲೆಕ್ಷನ್ ಗೆ ನಿಂತರೂ ಸಮಾಧಾನವಾಗಿಲ್ಲ. ಕುಟುಂಬದಲ್ಲಿ 12 ಜನವಿದ್ದರೂ 12 ಜನ ಚುನಾವಣೆಗೆ ನಿಲ್ಲುತ್ತಿದ್ದಾರೆ. ಮನೆಯಲ್ಲಿಯೇ ಈಗ ಟಿಕೆಟ್ ಗಾಗಿ ಬಡಿದಾಟ ಆರಂಭವಾಗಿದೆ. ಕುಟುಂಬದ ಸಮಸ್ಯೆಯನ್ನೇ ಬಗೆಹರಿಸಲಾಗದವರು ರಾಜ್ಯವನ್ನು, ಜನರ ಸಮಸ್ಯೆಯನ್ನು ಹೇಗೆ ನಿರ್ವಹಣೆ ಮಾಡ್ತಾರೆ ಎಂದು ಕೇಳಿದ್ದಾರೆ.

ಕೆಲ ರಾಷ್ಟ್ರಗಳಲ್ಲಿ ಒಂದೇ ಜಾತಿಯಿದ್ದರೂ ಜಾತಿ ಜಾತಿಗಳ ನಡುವೆಯೇ ಹೊಡೆದಾಟಗಳು ಆಗುತ್ತವೆ. ಅದೇ ರೀತಿ ಒಂದೇ ಕುಟುಂಬದವರಾದರೂ ಟಿಕೆಟ್ ಗಾಗಿ ಬಡಿದಾಡಿಕೊಳ್ಳುತ್ತಿದ್ದಾರೆ. ಮೊದಲು ಮನೆ ನಿರ್ವಹಣೆ ಮಾಡಲಿ ಎಂದು ಟಾಂಗ್ ನೀಡಿದ್ದಾರೆ.

*HDK ನೇತೃತ್ವದ JDS ಸಭೆ ದಿಢೀರ್ ರದ್ದು; ಹಾಸನ ಟಿಕೆಟ್ ಗೊಂದಲದಲ್ಲಿ ಬಿಗ್ ಟ್ವಿಸ್ಟ್*

https://pragati.taskdun.com/h-d-kumaraswamyjds-meetingcancelled/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button