Karnataka NewsPolitics

*ಹೀಗೇ ಮುಂದುವರಿದರೆ ನಾನೂ ಮಾನಹಾನಿ ಕೇಸ್ ಹಾಕುತ್ತೇನೆ: ಕಾಂಗ್ರೆಸ್ ಶಾಸಕನಿಗೆ ಕೇಂದ್ರ ಸಚಿವ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ತನ್ನ ಹಗರಣಗಳ ಬಗೆಗಿನ ಚರ್ಚೆ ವಿಷಯಾಂತರ ಮಾಡಲು ಏನೆಲ್ಲಾ ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಶಾಸಕರಿಗೆ ಬಿಜೆಪಿ 50 ಕೋಟಿ, 100 ಕೋಟಿ ಆಮಿಷವೊಡ್ಡುತ್ತಿದೆ ಎಂಬ ಹಸಿ ಹಸಿ ಸುಳ್ಳು ಆರೋಪ ಮಾಡುತ್ತಿದೆ ಎಂದು ಕಿಡಿ ಕಾರಿದರು.

ಕಾಂಗ್ರೆಸ್ ಶಾಸಕ ರವಿ ಗಣಿಗ ವಿರುದ್ಧ ಬಿಜೆಪಿ ಪಕ್ಷ ಈಗಾಗಲೇ ಪೊಲೀಸ್ ದೂರು ದಾಖಲಿಸಿದೆ. ಮತ್ತೂ ಹೀಗೇ ಅಪಪ್ರಚಾರ, ಆರೋಪ ಮಾಡಿದರೆ ಶಾಸಕ ರವಿ ವಿರುದ್ಧ ತಾವು ಮಾನಹಾನಿ ಕೇಸ್ ದಾಖಲಿಸುವುದಾಗಿ ಪ್ರಲ್ಹಾದ ಜೋಶಿ ಎಚ್ಚರಿಸಿದರು.

ಕಾಂಗ್ರೆಸ್ ತನ್ನ ಹಗರಣಗಳ ವಿಚಾರವನ್ನು ಡೈವರ್ಟ್ ಮಾಡುಲು ಶಾಸಕರಿಂದ ಈ ರೀತಿ ಮಾತನಾಡಿಸುತ್ತಿದೆ. ಒಳ ಜಗಳದಿಂದ ಕಾಂಗ್ರೆಸ್​​ನವರು ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಶಾಸಕ ರವಿ ಗಣಿಗ ವಿರುದ್ಧ ಪಕ್ಷ ದೂರು ಕೊಟ್ಟಿದ್ದು, ಪೊಲೀಸರು ಸರಿಯಾಗಿ ತನಿಖೆ ನಡೆಸಬೇಕು. ಹಿಟ್ & ರನ್ ರೀತಿ ಆಗಬಾರದು. ಒಂದು ವೇಳೆ ಯಾರಾದರೂ ಕರೆ ಮಾಡಿದ್ದರೆ ಅದರ ದಾಖಲೆ, ರೆಕಾರ್ಡ್ ನೀಡಬೇಕು ಎಂದು ಪೊಲೀಸ್ ಇಲಾಖೆಗೆ ಸಚಿವ ಜೋಶಿ ಆಗ್ರಹಿಸಿದರು.

ಕಾಂಗ್ರೆಸ್ ನವರೇ ದಾಖಲೆ ಕೊಟ್ಟಿದ್ದು: ಮುಡಾ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣಗಳ ದಾಖಲೆಗಳನ್ನು ನಮಗೆ ಕಾಂಗ್ರೆಸ್​ ನಾಯಕರೇ ನೀಡಿದ್ದರು ಎಂದು ಸಚಿವ ಜೋಶಿ ಹೇಳಿದರು.

ನಮಗೆ ದಾಖಲೆ ಕೊಟ್ಟವರು ಯಾರು ಎಂಬುದು ಸಿಎಂಗೂ ಗೊತ್ತಿದೆ ಎಂದ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನೆಗೆ ಹೋಗುವುದು ನಿಶ್ಚಿತ ಎಂದರು.

ಕಾಂಗ್ರೆಸ್ ಹೈಕಮಾಂಡ್ ಸಿಎಂ ಪರವಾಗಿದ್ದರೆ ಸಿದ್ದರಾಮಯ್ಯ ಅವರೇಕೆ ಪದೇ ಪದೆ ದೆಹಲಿಗೆ ಹೋಗುತ್ತಿದ್ದರು? ಎಂದು ಪ್ರಶ್ನಿಸಿದ ಜೋಶಿ, ಹೊಸ ಸಿಎಂ ಚರ್ಚೆ ಕಾಂಗ್ರೆಸ್ನಲ್ಲಿ ನಡೆಯುತ್ತಿದೆ ಎಂದರು.

ಜಿಂದಾಲ್ ಗೆ ಭೂಮಿ; ಕಾಂಗ್ರೆಸ್ ನಡೆ ಸಂಶಯ: ಜಿಂದಾಲ್​ಗೆ ಭೂಮಿ ನಿಡುವ ವಿಚಾರದಲ್ಲಿ ಅಂದು ವಿರೋಧ ತೋರಿದ್ದ ಕಾಂಗ್ರೆಸ್ ನವರೇ ಇಂದು ಭೂಮಿ ನೀಡಿದ್ದು ಸಂಶಯ ಮೂಡಿಸಿದೆ. ಆಗ ವಿರೋಧ ವ್ಯಕ್ತಪಡಿಸಿದ್ದ ಹೆಚ್​.ಕೆ.ಪಾಟೀಲ್​ ಅವರೇ ಇಂದು ಪರ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು ಜೋಶಿ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button