
ಪ್ರಗತಿವಾಹಿನಿ ಸುದ್ದಿ: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಪ್ರಜ್ವಲ್ ರೇವಣ್ಣಗೆ ಖೈದಿ ನಂಬರ್ ನೀಡಲಾಗಿದೆ.
ಪ್ರಜ್ವಲ್ ರೇವಣ್ಣಗೆ ಖೈದಿ ಸಂಖ್ಯೆ 15528 ನಂಬರ್ ನೀಡಲಾಗಿದೆ. ಇಂದಿನಿಂದ ಪ್ರಜ್ವಲ್ ಜೈಲಿನಲ್ಲಿ ಖೈದಿ ಸಮವಸ್ತ್ರ ಧರಿಸಬೇಕು. ಅವರ ಜೀವನ ಶೈಲಿಯಲ್ಲಿ ಎಲ್ಲವೂ ಬದಲಾವಣೆಯಾಗಲಿದೆ.
ಇಷ್ಟುದಿನ ಪ್ರಜ್ವಲ್ ವಿಚಾರಣಾಧೀನ ಖೈದಿಯಾಗಿದ್ದರು. ಇಂದಿನಿಂದ ಸಜಾಬಂಧಿಯಾಗಿದ್ದಾರೆ. ಜೈಲಿನ ಸಜಾಬಂಧಿ ನಿಯಮಗಳನ್ನು ಪ್ರಜ್ವಲ್ ಪಾಲಿಸಬೇಕು. ನಿಯಮದಂತೆ ಜೈಲಿನ ಅಧೀಕ್ಷಕರು ನೀಡುವ ಕೆಲಸ ಮಾಡಬೇಕು. ಜೈಲಿನಲ್ಲಿ ಸುಮಾರು 8 ಗಂಟೆ ಕೆಲಸ ಮಾಡಬೇಕು. ಕರಕುಶವಸ್ತ್ರ, ಮರ ಕೆಲಸಗಳಲ್ಲಿ ಯಾವುದಾದರೂ ಒಂದು ಕೆಲಸವನ್ನು ಪ್ರಜ್ವಲ್ ಆಯ್ಕೆ ಮಾಡಿಕೊಂಡು ಮಾಡಬೇಕಾಗುತ್ತದೆ. ಕೆಲಸಕ್ಕೆ ತಕ್ಕಂತೆ ಸಂಬಳವನ್ನೂ ನೀಡಲಾಗುತ್ತದೆ.