GIT add 2024-1
Kore@40
Beereshwara 33

*ಪ್ರಜ್ವಲ್ ವಿಡಿಯೋ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್: ಮತ್ತೋರ್ವ ಮಹಾ ನಾಯಕನ ಹೆಸರು ಬಹಿರಂಗ*

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರಜ್ವಲ್ ವಿಡಿಯೋ ವೈರಲ್ ಹಿಂದೆ ಮಹಾ ನಾಯಕನ ಕೈವಾಡವಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪಗಳನ್ನು ಮಾಡುತ್ತಿದ್ದರು. ಇದರ ಬೆನ್ನಲ್ಲೇ ಇದೀಗ ಜೆಡಿಎಸ್ ನಾಯಕರ ಹೆಸರೂ ವಿಡಿಯೋ ವೈರಲ್ ನಲ್ಲಿ ಥಳುಕು ಹಾಕಿಕೊಂಡಿದೆ.

ಅಶ್ಲೀಲ ವಿಡಿಯೋ ವೈರಲ್ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ನವೀನ್ ಗೌಡ ಎಂಬಾತ ತನ್ನ ಫೇಸ್ ಬುಕ್ ಖಾತೆಯಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಪ್ರಜ್ವಲ್ ಪೆನ್ ಡ್ರೈವ್ ಹಿಂದೆ ಜೆಡಿಎಸ್ ಶಾಸಕರೊಬ್ಬರೇ ಮಹಾ ನಾಯಕರಾಗಿರಬಹುದು ಎಂದು ಪೋಸ್ಟ್ ಮಾಡಿದ್ದಾನೆ.

Emergency Service

ಏಪ್ರಿಲ್ 20ರಂದು ನನಗೆ ರಸ್ತೆಯಲ್ಲಿ ಸಿಕ್ಕ ಪೆನ್ ಡ್ರೈವ್ ನ್ನು ನಾನು ಅರಕಲಗೂಡು ಜೆಡಿಎಸ್ ಶಾಸಕ ಎ.ಮಂಜು ಅವರಿಗೆ ನೀಡಿದ್ದೆ ಎಂದು ನವೀನ್ ಗೌಡ ಬರೆದುಕೊಂಡಿದ್ದಾನೆ.

ಏಪ್ರಿಲ್ 20ರಂದು ನನಗೆ ಸಿಕ್ಕ ಪೆನ್ ಡ್ರೈವ್ ನ್ನು ನಾನು ಏಪ್ರಿಲ್ 21ರಂದು ಅರಕಲಗೂಡಿನ ಮಾರುತಿ ಕಲ್ಯಾಣ ಮಂಟಪದಲ್ಲಿ ಶಾಸಕ ಎ.ಮಂಜು ಅವರಿಗೆ ನೀಡಿದ್ದೆ. ಕುಮಾರಸ್ವಾಮಿ ಅವರು ಹೇಳಿದ ಹಾಗೆ ವಿಡಿಯೋ ವೈರಲ್ ಹಿಂದೆ ಇರುವ ಮಹಾ ನಾಯಕ ಅರಕಲಗೂಡು ಶಾಸಕರೇ ಇರಬಹುದು ಎಂದು ಹೇಳಿದ್ದಾನೆ. ನವೀನ್ ಗೌಡ ಹೆಸರಲ್ಲಿನ ಈ ಪೋಸ್ಟ್ ಪ್ರಜ್ವಲ್ ಪ್ರಕರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ವಿಡಿಯೋ ವೈರಲ್ ಪ್ರಕರಣದಲ್ಲಿ ಈಗಾಗಲೇ ಎಸ್ಐಟಿ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಪ್ರಮುಖ ಆರೋಪಿಗಳಾದ ಕಾರ್ತಿಕ್ ಗೌಡ, ನವೀನ್ ಗೌಡ, ಪುಟ್ಟರಾಜು ಅವರನ್ನು ಬಂಧಿಸುವ ನಿಟ್ಟಿನಲ್ಲಿ ಎಸ್ಐಟಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಈ ನಡುವೆ ನವೀನ್ ಗೌಡ ಇಂತದ್ದೊಂದು ಸ್ಫೋಟಕ ಹೇಳಿಕೆ ನೀಡಿದ್ದಾನೆ.

Laxmi Tai add
Bottom Add3
Bottom Ad 2