ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಬರಲಿರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ತನ್ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ತಯಾರಿಸಿದೆ. ದೋಸ್ತಿ ಪಕ್ಷಗಳ ಮಧ್ಯೆ ಸ್ಥಾನ ಹೊಂದಾಣಿಕೆ ಅಂತಿಮವಾಗುವ ಮುನ್ನವೇ ಕಾಂಗ್ರೆಸ್ ಅಭ್ಯರ್ಥಿಗಳ ಸಂಭವನೀಯ ಪಟ್ಟಿ ಹೊರಬಿದ್ದಿದೆ.
ಬೆಂಗಳೂರಿನ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಗುರುವಾರ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಯಿತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮುಂತಾದವರು ಪಾಲ್ಗೊಂಡಿದ್ದರು.
ಈ ಪಟ್ಟಿ ಪ್ರಕಾರ ಬೆಳಗಾವಿಗೆ ರಮೇಶ್ ಜಾರಕಿಹೊಳಿ, ವಿವೇಕ್ ರಾವ್ ಪಾಟೀಲ್, ಅಂಜಲಿ ನಿಂಬಾಳ್ಕರ್, ನಾಗರಾಜ್ ಯಾದವ್ ಹಾಗೂ ಚನ್ನರಾಜ್ ಹಟ್ಟಿಹೊಳಿ ಹೆಸರಿದೆ.
ಉತ್ತರ ಕನ್ನಡಕ್ಕೆ ನಿವೇದಿತ್ ಆಳ್ವಾ, ಪ್ರಶಾಂತ್ ದೇಶಪಾಂಡೆ ಹಾಗೂ, ಭೀಮಣ್ಣ ನಾಯ್ಕ, ಬಿ.ಕೆ ಹರಿಪ್ರಸಾದ್ ಹೆಸರಿದೆ. ಬೀದರ್ ಗೆ ಈಶ್ವರ್ ಖಂಡ್ರೆ, ಸಿ.ಎಂ ಇಬ್ರಾಹಿಂ, ವಿಜಯ್ ಸಿಂಗ್, ಧಾರವಾಡಕ್ಕೆ ವಿನಯ್ ಕುಲಕರ್ಣಿ, ಶಾಖಿರ್ ಸನದಿ (ಐ ಜಿ ಸನದಿ ಪುತ್ರ), ವೀರಣ್ಣ ಮತ್ತಿಕಟ್ಟಿ, ಬಾಗಲಕೋಟೆಗೆ ಬಾಯಕ್ಕ ಮೇಟಿ, ವೀಣಾ ಕಾಶಪ್ಪನವರ್, ಅಜಯ್ ಕುಮಾರ್ ಸರನಾಯಕ್ ಅವರ ಹೆಸರಿದೆ.
ವಿಜಯಪುರಕ್ಕೆ ರಾಜು ಅಲಗೂರು, ಪ್ರಕಾಶ್ ರಾಠೋಡ್, ಕಾಂತಾ ನಾಯಕ್, ಕೊಪ್ಪಳಕ್ಕೆ ಬಸನಗೌಡ ಬಾದರ್ಲಿ, ಬಸವರಾಜ್ ಹಿಟ್ನಾಳ್, ವಿರುಪಾಕ್ಷಪ್ಪ, ದಾವಣಗೆರೆಗೆ ಎಸ್.ಎಸ್. ಮಲ್ಲಿಕಾರ್ಜುನ, ಎಚ್.ಎಮ್ ರೇವಣ್ಣ., ಬೆಂಗಳೂರು ಕೇಂದ್ರಕ್ಕೆ ರಿಜ್ವಾನ್ ಅರ್ಷದ್, ರೋಷನ್ ಬೇಗ್, ಎಚ್. ಪಿ. ಸಾಂಗ್ಲಿಯಾನಾ, ಬೆಂಗಳೂರು ದಕ್ಷಿಣಕ್ಕೆ ಪ್ರಿಯಕೃಷ್ಣ, ಬೆಂಗಳೂರು ಉತ್ತರಕ್ಕೆ ಸಿ. ನಾರಾಯಣ ಸ್ವಾಮಿ, ಎಂ. ಆರ್. ಸೀತಾರಾಂ, ಬಿ.ಎಲ್. ಶಂಕರ್, ಮೈಸೂರಿಗೆ ವಿಜಯ್ ಶಂಕರ್, ಸೂರಜ್ ಹೆಗ್ಡೆ, ಉಡುಪಿ, ಚಿಕ್ಕಮಗಳೂರಿಗೆ ಆರತಿ ಕೃಷ್ಣ, ಪ್ರಮೋದ್ ಮಧ್ವರಾಜ್, ಮಂಗಳೂರಿಗೆ ರಮಾನಾಥ ರೈ, ಜಯಮಾಲಾ, ಮೋಯುದ್ದೀನ್ ಬಾವಾ ಹೆಸರನ್ನು ನಮೂದಿಸಲಾಗಿದೆ.
ಉಳಿದಂತೆ ಹಾಲಿ ಸಂಸದರ ಹೆಸರನ್ನು ಸಹ ಪಟ್ಟಿಯಲ್ಲಿ ನಮೂದಿಸಲಾಗಿದೆ. ಚಿಕ್ಕೋಡಿಗೆ ಪ್ರಕಾಶ್ ಹುಕ್ಕೇರಿ, ತುಮಕೂರಿಗೆ ಮುದ್ದ ಹನುಮೇಗೌಡ, ಚಾಮರಾಜನಗರಕ್ಕೆ ಆರ್ ಧ್ರುವ ನಾರಾಯಣ್, ಚಿಕ್ಕಬಳ್ಳಾಪುರಕ್ಕೆ ಡಾ.ಎಂ.ವೀರಪ್ಪ ಮೊಯಿಲಿ, ಕಲಬುರಗಿಗೆ ಮಲ್ಲಿಕಾರ್ಜುನ ಖರ್ಗೆ, ರಾಯಚೂರಿಗೆ ಬಿ ವಿ ನಾಯಕ್, ಬಳ್ಳಾರಿಗೆ ವಿ.ಎಸ್. ಉಗ್ರಪ್ಪ, ಚಿತ್ರದುರ್ಗಕ್ಕೆ ಚಂದ್ರಪ್ಪ, ಕೋಲಾರಕ್ಕೆ ಕೆ.ಎಚ್.ಮುನಿಯಪ್ಪ ಹಾಗೂ ಬೆಂಗಳೂರು ಗ್ರಾಮಾಂತರಕ್ಕೆ ಡಿ.ಕೆ.ಸುರೇಶ್ ಅವರು ಅಭ್ಯರ್ಥಿಯಾಗಲಿದ್ದಾರೆ.
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಮತ್ತು ಇತರ ಗರುಪ್ ಗಳಿಗೆ ಶೇರ್ ಮಾಡಿ)