Latest

ತಂದೆಯನ್ನೇ ಹತ್ಯೆಗೈದ ಮಗ

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಕುಡಿತದ ದಾಸನಾಗಿದ್ದ ಮಗ ತನಗೆ ತಂದೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ತಂದೆಯನ್ನೇ ಬರ್ಬರವಾಗಿ ಹತ್ಯೆಗೈದ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ನಡೆದಿದೆ.

ನರಸಿಂಹಪ್ಪ ಎಂಬಾತ 65 ವರ್ಷದ ಮಂಜಪ್ಪ ಎಂಬ ತನ್ನ ತಂದೆಯನ್ನೇ ಹತ್ಯೆ ಮಾಡಿದ್ದಾನೆ. ಮಧ್ಯ ವ್ಯಸನಿಯಾಗಿದ್ದ ಮಗ ನರಸಿಂಹಪ್ಪ, ಮನೆಗೆ ಬಂದವನು ತಂದೆ ಬಳಿ ಹಣ ನೀಡುವಂತೆ ಕೇಳಿದ್ದಾನೆ. ಮಂಜಪ್ಪ ತಮ್ಮ ಬಳಿ ಹಣವಿಲ್ಲ ಎಂದಿದ್ದಾರೆ. ಅಲ್ಲದೇ ಬೈದು ಬುದ್ದಿ ಹೇಳಿ ಊಟ ಮಾಡುವಂತೆ ಹೇಳಿದ್ದಾರೆ. ಆ ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ.

ಬಳಿಕ ಮಗ ನರಸಿಂಹ, ತಂದೆ ಮಂಜಪ್ಪನ ಮೇಲೆ ಕಲ್ಲು ಎತ್ತಿಹಾಕಿ ಬೀಕರವಾಗಿ ಕೊಲೆ ಮಾಡಿದ್ದಾನೆ. ಹೊನ್ನಾಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಭಾರತದಲ್ಲಿ ಹೊಸ ರೂಪಾಂತರಿ ವೈರಸ್ ಪತ್ತೆ

Home add -Advt

Related Articles

Back to top button