Latest

ಮಸೀದಿಗಳ ಮೈಕ್ ತೆರವುಗೊಳಿಸದ ಸರ್ಕಾರ; ಮೇ.9ರಂದು ದೇವಾಲಯಗಳ ಮೇಲೆ ಭಜನೆ, ಮಂತ್ರಘೋಷ ಆರಂಭ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮೇ 1ರವರೆಗೆ ಗಡುವು ನೀಡಿದ್ದರೂ ಮಸೀದಿಗಳಲ್ಲಿನ ಮೈಕ್ ತೆರವುಗೊಳಿಸದ ರಾಜ್ಯ ಸರ್ಕಾರದ ಕ್ರಮಕ್ಕೆ ಕಿಡಿಕಾರಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಮಸೀದಿಗಳಿಗೆ ನೋಟೀಸ್ ಕೊಟ್ಟು ಸರ್ಕಾರ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಹೊರಟಿದೆ ಎಂದು ಗುಡುಗಿದರು.

ರಾತ್ರಿ ಹತ್ತರಿಂದ ಬೆಳಿಗ್ಗೆ 6 ಗಂಟೆಯವರೆಗೂ ಸಾರ್ವಜನಿಕವಾಗಿ ಮೈಕ್ ಬಳಸುವಂತಿಲ್ಲ, ಆಸ್ಪತ್ರೆ, ಶಾಲೆ, ಕಾಲೇಜು, ಜನವಸತಿ ಪ್ರದೇಶಗಳಲ್ಲಿ ಮೈಕ್ ಹಾಕುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ ಆದರೂ ಕ್ಯಾರೇ ಎನ್ನುತ್ತಿಲ್ಲ. ಮುಂಜಾನೆ 5 ಗಂಟೆಯಿಂದ ಆಜಾನ್ ಮೊಳಗುತ್ತಿದೆ. ಮೇ 1ರೊಳಗೆ ಮೈಕ್ ತೆರವುಗೊಳಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೂ ಕ್ರಮ ಕೈಗೊಂಡಿಲ್ಲ. ನಮ್ಮ ಎಚ್ಚರಿಕೆ ಲಘುವಾಗಿ ಪರಿಗಣಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೇ9ರಂದು ರಾಜ್ಯಾದ್ಯಂತ ಎಲ್ಲಾ ದೇವಾಲಯಗಳ ಮೇಲೆ ಮುಂಜಾನೆ 5 ಗಂಟೆಗೆ ಓಂ ನಮ: ಶಿವಾಯ, ರಾಮ ಜಪ, ಹನುಮಾನ್ ಚಾಲೀಸ, ಮಂತ್ರಘೋಷಣೆಗಳನ್ನು ಹಾಕಲು ನಿರ್ಧರಿಸಿದ್ದೇವೆ. ನಮ್ಮನ್ನು ಸರ್ಕಾರ ತಡೆಯಲು ಮುಂದಾದರೆ ಸಂಘರ್ಷ ನಡೆಯುತ್ತದೆ. ಅದಕ್ಕೆ ಸರ್ಕಾರವೇ ನೇರ ಹೊಣೆಯಾಗುತ್ತೆ ಎಂದು ಎಚ್ಚರಿಸಿದ್ದಾರೆ.

ಕೆಲಸ ಸಿಕ್ಕ ಮೊದಲ ದಿನವೇ ನರ್ಸ್ ಅನುಮಾನಾಸ್ಪದ ಸಾವು; ಅತ್ಯಾಚಾರ, ಕೊಲೆ ಶಂಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button