ಸೊಸೆಯ ಎದುರು ಸ್ಪರ್ಧಿಸಲು ಒಪ್ಪದೇ ನಾಮಪತ್ರ ಹಿಂಪಡೆದ ಮಾವ

 

ಗೋವಾ ಚುನಾವಣೆಯಲ್ಲಿ ಕುತೂಹಲಕಾರಿ ವಿದ್ಯಮಾನ

 

ಪ್ರಗತಿವಾಹಿನಿ ಸುದ್ದಿ, ಪಣಜಿ – ಗೋವಾ ಚುನಾವಣೆ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಈ ನಡುವೆ ಮಹತ್ವದ ಬೆಳವಣಿಗೆಯೊಂದರಲ್ಲಿ ಗೋವಾದ ಮಾಜಿ ಸಿಎಂ, ಹಿರಿಯ ಕಾಂಗ್ರೆಸ್ ಮುಖಂಡ ಪ್ರತಾಪಸಿಂಹ ರಾಣೆ ತಮ್ಮ ಸೊಸೆ ಬಿಜೆಪಿ ಅಭ್ಯರ್ಥಿ ದೆವಿಯಾ ರಾಣೆ ಎದುರು ಸ್ಪರ್ಧಿಸದಿರಲು ನಿರ್ಧರಿಸಿ ನಾಮಪತ್ರ ಹಿಂಪಡೆದಿದ್ದಾರೆ.

ಗೋವಾದ ಪೊರಿಯೆಮ್ ಕ್ಷೇತ್ರದಿಂದ ಸತತ ಆರು ಬಾರಿ ಆಯ್ಕೆಯಾಗಿರುವ ಪ್ರತಾಪ್‌ಸಿಂಹ ರಾಣೆ ಈವರೆಗೂ ಚುನಾವಣೆಯಲ್ಲಿ ಸೋಲು ಕಂಡಿಲ್ಲ. ಆದರೆ ಈ ಬಾರಿ ಕಾಂಗ್ರೆಸ್ ನಿಂದ ಅವರು ನಾಮಪತ್ರ ಸಲ್ಲಿಸಿದ್ದರೆ ಅವರ ಸೊಸೆ ದೇವಿಯಾ ರಾಣೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದರಿಂದ ಕೌಟುಂಬಿಕ ವಾತಾವರಣ ಕೆಡುವ ಸಾಧ್ಯತೆ ಇರುವುದರಿಂದ ಪ್ರತಾಪ್‌ಸಿಂಹ ರಾಣೆ ನಾಮಪತ್ರ ವಾಪಸ್ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಮಾವ ರಾಣೆ, ಕುಟುಂಬದಲ್ಲಿ ಯಾರಾದರೂ ಒಬ್ಬರು ಪ್ರಬುದ್ಧವಾದ ನಿರ್ಣಯ ಕೈಗೊಳ್ಳಲೇಬೇಕಾಗುತ್ತದೆ ಎಂದಿದ್ದಾರೆ.

ಜಾರಕಿಹೊಳಿ ಸಹೋದರರ ವಿರುದ್ಧ ಮುಖ್ಯಮಂತ್ರಿ ಬಳಿ ದೂರು: ಬೆಳಗಾವಿ ನಿಯೋಗಕ್ಕೆ ಮುಹೂರ್ತ ಫಿಕ್ಸ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button