*ಬೈಕ್ ಅಪಘಾತದಲ್ಲಿ ಗರ್ಭಿಣಿ ಯುವತಿ ಸಾವು*

ಪ್ರಗತಿವಾಹಿನಿ ಸುದ್ದಿ: ದೇಗುಲದಿಂದ ಪೂಜೆ ಮುಗಿಸಿಕೊಂಡು ಬರುತ್ತಿದ್ದ ದಂಪತಿಯ ಬೈಕ್ ಅಪಘಾತಕ್ಕೀಡಾಗಿ ಗರ್ಭಿಣಿ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರಿನ ನೆಲಮಂಗಲದ ತೋಟನಹಳ್ಳಿ ಬಳಿ ಅಪಘಾತ ನಡೆದಿದೆ. ಈ ಅಪಘಾತದಲ್ಲಿ  ಸಿಂಚನ ಮೃತ ದುರ್ದೈವಿಯಾಗಿದ್ದು, ಪತಿ ಮಂಜುನಾಥ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೇವರ ಪೂಜೆ ಮುಗಿಸಿಕೊಂಡು ಸೀಮಂತ ಕಾರ್ಯಕ್ರಮಕ್ಕೆ ಮಂಜುನಾಥ್ – ಸಿಂಚನಾ ದಂಪತಿ ತೆರಳುತ್ತಿದ್ದರು. ಈ ವೇಳೆ ಇವರ ವಾಹನಕ್ಕೆ ಜಲ್ಲಿ ತುಂಬಿದ ಲಾರಿ ಗುದ್ದಿತ್ತು. ಲಾರಿ ಗುದ್ದಿದ ರಭಸಕ್ಕೆ ಏಳು ತಿಂಗಳ ಗರ್ಭಿಣಿ ಸಿಂಚನ … Continue reading *ಬೈಕ್ ಅಪಘಾತದಲ್ಲಿ ಗರ್ಭಿಣಿ ಯುವತಿ ಸಾವು*