Kannada NewsKarnataka NewsNational

*ಬೈಕ್ ಅಪಘಾತದಲ್ಲಿ ಗರ್ಭಿಣಿ ಯುವತಿ ಸಾವು*

ಪ್ರಗತಿವಾಹಿನಿ ಸುದ್ದಿ: ದೇಗುಲದಿಂದ ಪೂಜೆ ಮುಗಿಸಿಕೊಂಡು ಬರುತ್ತಿದ್ದ ದಂಪತಿಯ ಬೈಕ್ ಅಪಘಾತಕ್ಕೀಡಾಗಿ ಗರ್ಭಿಣಿ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಂಗಳೂರಿನ ನೆಲಮಂಗಲದ ತೋಟನಹಳ್ಳಿ ಬಳಿ ಅಪಘಾತ ನಡೆದಿದೆ. ಈ ಅಪಘಾತದಲ್ಲಿ  ಸಿಂಚನ ಮೃತ ದುರ್ದೈವಿಯಾಗಿದ್ದು, ಪತಿ ಮಂಜುನಾಥ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Home add -Advt

ದೇವರ ಪೂಜೆ ಮುಗಿಸಿಕೊಂಡು ಸೀಮಂತ ಕಾರ್ಯಕ್ರಮಕ್ಕೆ ಮಂಜುನಾಥ್ – ಸಿಂಚನಾ ದಂಪತಿ ತೆರಳುತ್ತಿದ್ದರು. ಈ ವೇಳೆ ಇವರ ವಾಹನಕ್ಕೆ ಜಲ್ಲಿ ತುಂಬಿದ ಲಾರಿ ಗುದ್ದಿತ್ತು. ಲಾರಿ ಗುದ್ದಿದ ರಭಸಕ್ಕೆ ಏಳು ತಿಂಗಳ ಗರ್ಭಿಣಿ ಸಿಂಚನ ಗೆ ಸ್ಥಳದಲ್ಲೇ ಗರ್ಭಪಾತವಾಗಿ ಸಾವನ್ನಪ್ಪಿದ್ದು, ಪತ್ನಿಯ ಸಾವು ಕಂಡು ಪತಿಯ ಗೋಳಾಟ ಮುಗಿಲುಮುಟ್ಟಿದೆ. ನೆಲಮಂಗಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

Related Articles

Back to top button