Belagavi NewsBelgaum NewsKannada NewsKarnataka NewsLatest

ಅಖಿಲ ಕರ್ನಾಟಕ ಬ್ರಾಹ್ಮಣ ಸಮಾವೇಶಕ್ಕೆ ಸಿದ್ಧತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಜನವೇರಿ 17 ಮತ್ತು 18 ರಂದು ಎರಡು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ
ರಾಜ್ಯ ಮಟ್ಟದ ಬ್ರಾಹ್ಮಣ ಸಮಾವೇಶ ನಡೆಯಲಿದೆ.

ಬೆಳಗಾವಿ ಜಿಲ್ಲೆಯ ಬ್ರಾಹ್ಮಣ ಸಮಾಜ ಟ್ರಸ್ಟ್ ಅಧ್ಯಕ್ಷ ರಾಮ ಭಂಡಾರಿ, ಉಪಾಧ್ಯಕ್ಷ ಭರತ ದೇಶಪಾಂಡೆ ಮತ್ತು  ಗುತ್ತಿಗೆದಾರ ರಾಜೇಂದ್ರ ದೇಸಾಯಿ ಅವರನ್ನು ಸಮಾವೇಶ ಸಮಿತಿಯ ರಾಜ್ಯಮಟ್ಟದ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮಾಜಿ ನಗರಸೇವಕಿ ಅನುಶ್ರೀ ದೇಶಪಾಂಡೆ ಅವರನ್ನು ಜಿಲ್ಲಾ ಮಟ್ಟದ ಸಂಘಟಕರನ್ನಾಗಿ ನೇಮಿಸಲಾಗಿದೆ.
ಇವರ ನೇತೃತ್ವದಲ್ಲಿ ಈಗಾಗಲೇ ಬ್ರಾಹ್ಮಣ ಸಮಾವೇಶದ  ಸಿದ್ಧತೆಗಾಗಿ ಬೆಳಗಾವಿ ನಗರದಲ್ಲಿ ಸಮಾಜದ ಸಭೆಗಳನ್ನು ನಡೆಸಲಾಗುತ್ತಿದೆ. ತಾಲೂಕುವಾರು ಕಮೀಟಿಗಳನ್ನು ಕೂಡ ರಚಿಸಲಾಗಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button