ಸಚಿವ ಈಶ್ವರಪ್ಪ ಬಂಧನಕ್ಕೆ ಎಲ್ಲೆಡೆ ಒತ್ತಡ; ಸರಕಾರ ಹಸ್ತಕ್ಷೇಪ ಇಲ್ಲ ಅಂದ್ರು ಸಿಎಂ; ಡಿಜಿಪಿ ಇದ್ರೆ ಈಶ್ವರಪ್ಪ ಬಂಧಿಸಿ ಅಂದ್ರು ಡಿಕೆಶಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ಅವರನ್ನು ಬಂಧಿಸಬೇಕೆನ್ನುವ ಒತ್ತಡ ಎಲ್ಲ ಕಡೆಯಿಂದ ತೀವ್ರವಾಗುತ್ತಿದೆ.
ಸಂತೋಷ ಪಾಟೀಲ ಡೆತ್ ನೋಟ್ ಆಧರಿಸಿ ಈಶ್ವರಪ್ಪ ಬಂಧಿಸಬೇಕು. ಸಂತೋಷ ಪಾಟೀಲ ಪ್ರಧಾನಿಗೂ ಪತ್ರ ಬರೆದಿದ್ದರು. ಆ ನಂತ ಈಶ್ವರಪ್ಪ ಸಾಕಷ್ಟು ಹಿಂಸೆ ನೀಡಿದ್ದರು. ಹಾಗಾಗಿ ಸಾವಿಗಿಂತ ದೊಡ್ಡ ಪ್ರೂಪ್ ಇದಕ್ಕೆ ಬೇಕಿಲ್ಲ. ಕೂಡಲೇ ಸಚಿವರ ವಿರುದ್ಧ ಎಫ್ಐಆರ್ ಧಾಖಲಿಸಿ ಬಂಧಿಸಬೇಕು ಎಂದು ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಡಿಜಿಪಿ ಇದ್ದರೆ ತಕ್ಷಣ ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆಗ್ರಹಿಸಿದ್ದಾರೆ.
ಸರಕಾರ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈಗಾಗಲೆ ಈಶ್ವರಪ್ಪ ಸಂತೋಷ ಪಾಟೀಲ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈಗ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಎಲ್ಲ ದೃಷ್ಟಿಕೋನದಿಂದ ತನಿಖೆ ನಡೆಸಲಿದ್ದಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಈಶ್ವರಪ್ಪ ಬಂಧಿಸುವವರೆಗೆ ಸಂತೋಷ ಪಾಟೀಲ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಸಹೋದರ ಪ್ರಶಾಂತ ತಿಳಿಸಿದ್ದಾರೆ.
ಸಂತೋಷ ಪಾಟೀಲ ಬಿಜೆಪಿ ಕಾರ್ಯಕ್ರತರಾಗಿದ್ದು, ಅವರಿಗಂ ಹಿಂಡಲಗಾ ಜೊತ್ರೆ ವೇಳೆ ಕೆಲಸ ಮಾಡಿಸಿಕೊಂಡು ಹಣ ಪಾವತಿಸದೆ ಕಿರುಕುಳ ನೀಡಲಾಗಿದೆ. ಬಿಜೆಪಿಯವರೇ ಅವರನ್ನು ಮರ್ಡರ್ ಮಾಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜೀವ ಟೋಪಣ್ಣವರ್ ಆರೋಪಿಸಿದ್ದಾರೆ.
ಸಂತೋಷ ಪಾಟೀಲ ಅವರಿಗೆ ಪತ್ನಿ ಹಾಗೂ ಒಂದು ವರ್ಷದ ಮಗುವಿದೆ.
ಬೆಳಗಾವಿಯ ಗುತ್ತಿಗೆದಾರ ಉಡುಪಿಯಲ್ಲಿ ಆತ್ಮಹತ್ಯೆ
ಈಶ್ವರಪ್ಪ ಬಂಧಿಸುವವರೆಗೆ ಸಂತೋಷ ಪಾಟೀಲ ಅಂತ್ಯಕ್ರಿಯೆ ಮಾಡಲ್ಲ – ಸಹೋದರ ಪ್ರಶಾಂತ್ ಹೇಳಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ