Latest

ನಟ ಯಶ್, ರಿಷಭ ಶೆಟ್ಟಿ ಸೇರಿ ಹಲವು ಸೆಲೆಬ್ರಿಟಿಗಳೊಂದಿಗೆ ಪ್ರಧಾನಿ ಮೋದಿ ಭೇಟಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ‘ಎರೋ ಇಂಡಿಯಾ’ ಉದ್ಘಾಟನೆಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ರಾಜಭವನದಲ್ಲಿ ಕೆಲವು ಸಾಮಾಜಿಕ ಮಾಧ್ಯಮ ಪ್ರಭಾವಿಗಳ ಜೊತೆಗೆ ನಟರಾದ ಯಶ್ ಮತ್ತು ರಿಷಬ್ ಶೆಟ್ಟಿ  ಸೇರಿದಂತೆ ಹಲವು ಖ್ಯಾತನಾಮರನ್ನು ಸೋಮವಾರ ಔಪಚಾರಿಕವಾಗಿ ಭೇಟಿಯಾದರು.

“ನಟದ್ವಯರೊಂದಿಗೆ ಪ್ರಧಾನಿ ಸಂಸ್ಕೃತಿ, ನವ ಭಾರತ ಮತ್ತು ಕರ್ನಾಟಕದ ಪ್ರಗತಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಿದ್ದಾರೆ” ಎಂದು ಬಿಜೆಪಿ ಕರ್ನಾಟಕದ ಅಧಿಕೃತ ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದೆ.

Home add -Advt

ಅನಿಲ್ ಕುಂಬ್ಳೆ, ಮಯಾಂಕ್ ಅಗರ್ವಾಲ್ ಮತ್ತು ವೆಂಕಟೇಶ್ ಪ್ರಸಾದ್ ಸೇರಿದಂತೆ ಹಾಲಿ ಮತ್ತು ಮಾಜಿ ಕ್ರಿಕೆಟಿಗರನ್ನು ಭೇಟಿಯಾಗಿ ನರೇಂದ್ರ ಮೋದಿ ಅವರು ಚರ್ಚಿಸಿದ್ದಾರೆ.

ಚುನಾವಣೆ ಹೊಸ್ತಿಲಲ್ಲಿ ಖ್ಯಾತನಾಮರ ಜೊತೆ ಪ್ರಧಾನಿ ಭೇಟಿ ಹೊಸ ಕುತೂಹಲಗಳನ್ನು ಹುಟ್ಟುಹಾಕಿದೆ.

“ಅಯ್ಯೋ ಶ್ರದ್ಧಾ..!”:

ಖ್ಯಾತ ಕೊಮೆಡಿಯನ್ ಶ್ರದ್ಧಾ ಅವರನ್ನು ಸಹ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಮಾಡಿದ್ದಾರೆ.

ಪ್ರಧಾನಿ ಜತೆ ಭೇಟಿಯ ಫೋಟೊಗಳನ್ನು ಜಾಲತಾಣದಲ್ಲಿ ಶೇರ್ ಮಾಡಿರುವ ಶ್ರದ್ಧಾ ತಮ್ಮನ್ನು ಕಂಡೊಡನೆ ಪ್ರಧಾನಿ ಬಾಯಲ್ಲಿ ಬಂದ ಶಬ್ದ “ಅಯ್ಯೋ ಶ್ರದ್ಧಾ..!” ಎಂಬುದನ್ನು ಬರೆದುಕೊಂಡಿದ್ದು ಇದೀಗ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

Related Articles

Back to top button