Latest
ಬಿಗ್ ಬಿ 80ನೇ ಹುಟ್ಟು ಹಬ್ಬಕ್ಕೆ ನಮೋ ವಿಶ್

ಪ್ರಗತಿವಾಹಿನಿ ಸುದ್ದಿ, ಮುಂಬೈ: 80 ನೇ ಹುಟ್ಟುಹಬ್ಬ ಆಚರಿಸಿಕೊಂಡ ನಟ ಅಮಿತಾಬ್ ಬಚ್ಚನ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಶುಭ ಹಾರೈಸಿದ್ದಾರೆ.
“ತಲೆಮಾರುಗಳಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸಿದ ಮತ್ತು ರಂಜಿಸಿದ ಭಾರತದ ಅತ್ಯಂತ ಗಮನಾರ್ಹ ಚಲನಚಿತ್ರ ವ್ಯಕ್ತಿಗಳಲ್ಲಿ ಒಬ್ಬರು. ಅವರು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸಲಿ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ನಮೋ ವಿಶ್ ಗೆ ಪ್ರತಿಯಾಗಿ “ನಿಮ್ಮ ಹಾರೈಕೆಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ನಿಮ್ಮ ಆಶೀರ್ವಾದದ ಮಾತುಗಳು ಯಾವಾಗಲೂ ನನಗೆ ಸ್ಫೂರ್ತಿಯ ಮೂಲವಾಗಿರುತ್ತದೆ” ಎಂದು ಎಂದು ಬಾಲಿವುಡ್ ಬಿಗ್ ಬಿ ಪ್ರತಿಕ್ರಿಯಿಸಿದ್ದಾರೆ.
ಆನ್ ಲೈನ್ ನಲ್ಲಿ ವಾಚು ಆರ್ಡರ್ ಮಾಡಿದ ಮಹಿಳೆಗೆ ಕಳಿಸಿದ್ದು ಸೆಗಣಿ !




