ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾ ಬೆನ್ ನಿಧನ

ಪ್ರಗತಿವಾಹಿನಿ ಸುದ್ದಿ, ಅಹಮದಾ ಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್ ನಿಧನರಾಗಿದ್ದಾರೆ. ಅವರಿಗೆ 100 ವರ್ಷ ವಯಸ್ಸಾಗಿತ್ತು.

ಅನಾರೋಗ್ಯದಿಂದಾದಿ ಹೀರಾ ಬೆನ್ ಅವರನ್ನು ಈಚೆಗೆ ಅಹಮದಾಬಾದ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಗಿನಜಾವ 3.30ಕ್ಕೆ ನಿಧನರಾದರು. ಅವರಿಗೆ 6 ಜನ ಮಕ್ಕಳಿದ್ದಾರೆ.

Home add -Advt

ಅವರು ವಿಸ್ ನಗರದಲ್ಲಿ ಜನಿಸಿದ್ದರು.

ಹೀರಾ ಬೆನ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಪಡಿಸಿದ್ದಾರೆ.

ತಾಯಿ ನಿಧನದ ಸುದ್ದಿ ಕೇಳಿದ ತಕ್ಷಣ ಪ್ರಧಾನಿ ಮೋದಿ ಅಹಮದಾಬಾದ್ ಗೆ ಧಾವಿಸಿದರು. ಸಹೋದರ ಪಂಕಜ್ ಮೋದಿ ಮನೆಯಲ್ಲಿ ಹೀರಾ ಬೆನ್ ಪಾರ್ಥಿವ ಶರೀರ ಇಡಲಾಗಿದೆ.

 

 

 

Related Articles

Back to top button