Latest

ಪ್ರಧಾನಿ ಮೋದಿ ಆಹಾರದ ಖರ್ಚು ನೋಡಿಕೊಳ್ಳುತ್ತಿರುವುದು ಯಾರು?

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ದೇಶದ ಪ್ರಧಾನಿಯಾದವರ ಆಹಾರದ ಖರ್ಚುವೆಚ್ಚಗಳನ್ನು ಸಾಮಾನ್ಯವಾಗಿ ಸರಕಾರವೇ ನೋಡಿಕೊಳ್ಳುತ್ತದೆ. ಈ ಹಿಂದಿನ ಬಹುತೇಕ ಪ್ರಧಾನಿಗಳ ಆಹಾರದ ಖರ್ಚನ್ನು ಸರಕಾರವೇ ಭರಿಸುತ್ತ ಬಂದಿದೆ.

ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಆಹಾರದ ಖರ್ಚುವೆಚ್ಚಗಳ ಬಗ್ಗೆ ಕುತೂಹಲ ಹೊಂದಿದ್ದ ವ್ಯಕ್ತಿಯೊಬ್ಬರು ಪ್ರಧಾನಿ ಕಚೇರಿ (PMO) ದಿಂದ ಆರ್ ಟಿಐ ಮೂಲಕ ಮಾಹಿತಿ ಪಡೆದಾಗ ಅಚ್ಚರಿಯ ವಿಷಯವೊಂದು ಬಹಿರಂಗವಾಗಿದೆ.

Home add -Advt

ಅದರ ಪ್ರಕಾರ ತಮ್ಮ ಆಹಾರದ ಖರ್ಚುವೆಚ್ಚವನ್ನು ಸ್ವತಃ ನರೇಂದ್ರ ಮೋದಿ ಅವರೇ ಭರಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ  ಸರಕಾರದ ಒಂದು ಪೈಸೆ ಕೂಡ ಖರ್ಚಾಗುತ್ತಿಲ್ಲ. ಅವರ ವಾಹನಗಳ ಖರ್ಚನ್ನು ಮಾತ್ರ ವಿಶೇಷ ರಕ್ಷಣಾ ಪಡೆ (SPG) ಭರಿಸುತ್ತಿದೆ ಎಂದು ಪ್ರಧಾನಿ ಕಚೇರಿ ಕಾರ್ಯದರ್ಶಿ ಬಿನೋದ್ ಬಿಹಾರಿ ಮಾಹಿತಿ ನೀಡಿದ್ದಾರೆ.

ಮುರುಘಾ ಶ್ರೀಗಳಿಗೆ 14 ದಿನ ನ್ಯಾಯಾಂಗ ಬಂಧನ; ಜಿಲ್ಲಾ ಕಾರಾಗೃಹಕ್ಕೆ ರವಾನೆ

Related Articles

Back to top button