ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಎರಡೂವರೆ ವರ್ಷ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಕೊನೆಯ ಉಸಿರಿರುವವರೆಗೂ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಬೆಳಗಾವಿ ಜಿಲ್ಲಾ ಪೋಕ್ಸೋ ನ್ಯಾಯಾಲಯ 1 ತೀರ್ಪು ನೀಡಿದೆ.
ನೇಸರಗಿ ಪೋಲಿಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆದು ತೀರ್ಪು ಪ್ರಕಟಿಸಲಾಗಿದೆ. ಪಿರ್ಯಾದಿಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್. ವಿ ಪಾಟೀಲ ವಾದ ಮಂಡಿಸಿದ್ದರು.
ಸುಬಾಷ ಮಹಾದೇವ ನಾಯ್ಕ (ವಯಸ್ಸು 21 ಸಾ. ವಣ್ಣೂರ ತಾ ಬೈಲಹೊಂಗಲ ಜಿಲ್ಲಾ ಬೆಳಗಾವಿ) ಎಂಬಾತ ಬಾಲಕಿಯು ಶಾಲೆಯ ಆವರಣದಲ್ಲಿ ಆಟ ಆಡುತ್ತಿದ್ದಾಗ ಅದೇ ಶಾಲೆಯ ಹಿಂಬಾಗದಲ್ಲಿರುವ ಶಾಲೆಯ ಕಟ್ಟಡದ ಕಂಪೌಂಡ್ ಗೋಡೆಯ ಹತ್ತಿರ ಕರೆದುಕೋಂಡು ಹೋಗಿ ಅವಳ ಮೇಲೆ ಲೈಂಗಿಕ ಅತ್ಯಾಚಾರ ಮಾಡಿ ಅವಳ ಎಡಬಾಜು ಗಲ್ಲಕ್ಕೆ ಹಲ್ಲಿನಿಂದ ಕಚ್ಚಿ ಗಾಯಪಡಿಸಿದ್ದಲ್ಲದೆ ಅವಳ ಗುಪ್ತಾಂಗಕ್ಕೂ ಸಹ ಗಾಯಪಡಿಸಿ ಅವಳಿಗೆ ಕೊಲೆ ಮಾಡುವ ಉದ್ದೇಶದಿಂದ ಅವಳ ಕುತ್ತಿಗೆಗೆ ಕೈಯಿಂದ ಹಿಚುಕಿ ಗಾಯಪಡಿಸಿ ಅಲ್ಲಿಯೇ ಹೊಸದಾಗಿ ಹೊಂಡ ತೆಗೆದು ಅದರಲ್ಲಿ ಬಾಲಕಿ ಮುಚ್ಚಿ ಕೊಲೆ ಮಾಡುವ ಪ್ರಯತ್ನದಲ್ಲಿದ್ದಾಗ ಸಿಕ್ಕಿ ಬಿದ್ದಿದ್ದ.
ತನಿಖಾಧಿಕಾರಿಯಾದ ಎಚ್. ಸಂಗನಗೌಡ ಹೆಚ್ಚುವರಿ ಜಿಲ್ಲಾ & ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೋ ನ್ಯಾಯಾಲಯ-01 ಬೆಳಗಾವಿ ನ್ಯಾಯಾಲಯಕ್ಕೆ ದೋಷಾರೋಪಣಿ ಪಟ್ಟಿಯನ್ನು ಸಲ್ಲಿಸಿದ್ದು, ನ್ಯಾಯಾಧೀಶರಾದ ಸಿ. ಎಮ್. ಪುಷ್ಪಲತಾ ಇವರು ಪ್ರಕರಣವನ್ನು ವಿಚಾರಣಿ ಮಾಡಿ, ಒಟ್ಟು 33 ಸಾಕ್ಷಿಗಳ ವಿಚಾರಣೆ ಮೇಲಿಂದ ಹಾಗೂ 46 ದಾಖಲೆಗಳು, ಹಾಗೂ 13 ಮುದ್ದೆಮಾಲಗಳ ಆಧಾರದ ಮೇಲಿಂದ ಆರೋಪಿ ಸುಭಾಷ ಮಹಾದೇವ ನಾಯ್ಕ ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು ತೀರ್ಪು ನೀಡಿದರು.
ಆರೋಪಿತನು ಕೊನೆ ಉಸಿರು ಇರುವವರೆಗೂ ಕಠಿಣ ಕಾರಾಗೃಹ ತೀಕ್ಷೆ & 30,000 ರೂಪಾಯಿ ದಂಡ ವಿಧಿಸಿ ಪ್ರಕರಣದ ತೀರ್ಪು ನೀಡಿದ್ದಾರೆ. ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ 1 ಲಕ್ಷ ರೂ. ಪರಿಹಾರ ಧನವನ್ನು ಪಡೆಯಲು ನ್ಯಾಯಾಲಯ ಆದೇಶಿಸಿದೆ. ವಿಶೇಷ ಸರ್ಕಾರಿ ಅಭಿಯೋಜಕ ಎಲ್. ವಿ ಪಾಟೀಲ ವಾದ ಮಂಡಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ