
ಪ್ರಗತಿವಾಹಿನಿ ಸುದ್ದಿ: ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕುಟುಂಬಕ್ಕೆ ನಿರಂತರವಾಗಿ ಜೀವ ಬೆದರಿಕೆ ಹಾಕಲಾಗುತ್ತಿದೆ. ಈ ಬಗ್ಗೆ ಸ್ವತಃ ಸಚಿವರು ಮಾಹಿತಿ ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ನಿರಂತರವಾದ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಅಲ್ಲದೇ ಅತ್ಯಂತ ಕೆಟ್ಟದಾಗಿ ನಿಂದನೆಗಳನ್ನು ಮಾಡುತ್ತಿದ್ದಾರೆ. ಇದರಿಂದ ನಾನು ವಿಚಲಿತನಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಗಾಂಧೀಜಿ ಹಾಗೂ ಅಂಬೇಡ್ಕರ್ ಅವರನ್ನು ಬಿಡದವರು ಇನ್ನು ನನ್ನನ್ನು ಬಿಡುತ್ತಾರಾ? ಈ ರೀತಿ ಬೆದರಿಕೆ ಕರೆಗಳು ನನ್ನನ್ನು ಮೌನವಾಗಿಸುತ್ತೆ ಅಂತಾ ಭಾವಿಸಿದರೆ ಅದು ತಪ್ಪು. ಕಳೆದ ಎರಡು ದಿನಗಳಿಂದ ನನ್ನ ಫೋನ್ ರಿಂಗ್ ಆಗುವುದು ನಿಂತಿಲ್ಲ. ಸರ್ಕಾರಿ ಶಾಲೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಆರ್.ರೆಸ್.ಎಸ್ ಚಟುವಟಿಕೆಗಳನ್ನು ಪ್ರಶ್ನಿಸಲು ಹಾಗೂ ತಡೆಯಲು ಧೈರ್ಯ ಮಾಡಿದ್ದರಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ಬೆದರಿಕೆ ಕರೆಗಳು ಬರುತ್ತಿವೆ. ಇದರಿಂದ ನಾನು ಆಶ್ಚರ್ಯವನ್ನೂ ಪಡುವುದಿಲ್ಲ, ವಿಚಲಿತನೂ ಆಗಲ್ಲ ಎಂದು ತಿಳಿಸಿದ್ದಾರೆ.
https://www.facebook.com/share/p/1MX4zHUfLs
https://www.facebook.com/share/17HUCs85nW