ಪ್ರಿಯಾಂಕಾ ಗಾಂಧಿಗೆ 2 ಕೋಟಿ ನೀಡಿ ಯೆಸ್ ಬ್ಯಾಂಕ್ ಸಂಸ್ಥಾಪಕ ಖರೀದಿಸಿದ್ದ ಪೇಂಟಿಂಗ್ ಯಾವುದು?

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಯೆಸ್ ಬ್ಯಾಂಕ್ ಆರ್ಥಿಕ ಸಂಕಷ್ಟ, ಅಕ್ರಮ ಹಣ ರವಾನೆ ಆರೋಪದ ಮೇಲೆ ಇಡಿ ವಶದಲ್ಲಿರುವ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬಳಿ 2 ಕೋಟಿ ರೂ.ಮೌಲ್ಯದ ಪೇಂಟಿಂಗ್ ಖರೀದಿ ಮಾಡಿದ್ದರು ಎಂಬ ವಿಷಯ ಚರ್ಚೆಗೆ ಕಾರಣವಗಿದೆ.

ಇಡಿ ತನಿಖೆ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ಪೇಂಟಿಂಗ್ ಖರೀದಿಸಲು 2010ರಲ್ಲಿ ರಾಣಾ ಕಪೂರ್ ಪ್ರಿಯಾಂಕಾ ಗಾಂಧಿ ಅವರಿಗೆ ನೀಡಿರುವ ಚೆಕ್‍ನ ಪ್ರತಿ ಕೂಡ ಸಿಕ್ಕಿದೆ. ಜೊತೆಗೆ ಪೇಂಟಿಂಗ್ ಖರೀದಿ ವಿಚಾರವಾಗಿ ರಾಣಾ, ಪ್ರಿಯಾಂಕಾಗೆ ಪತ್ರ ಬರೆದಿರುವುದು ಕೂಡ ಬೆಳಕಿಗೆ ಬಂದಿದೆ.

ಕಾಂಗ್ರೆಸ್ಸಿನ 100 ವರ್ಷದ ಸಂಭ್ರಮದ ವೇಳೆ ಎಂಎಫ್ ಹುಸೇನ್ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಚಿತ್ರ ಬಿಡಿಸಿದ್ದರು. ಈ ಪೇಂಟಿಂಗ್ ಅನ್ನು 2010ರಲ್ಲಿ ಪ್ರಿಯಾಂಕಾ ಗಾಂಧಿ ಅವರು ಯೆಸ್ ಬ್ಯಾಂಕ್ ಮಾಲೀಕ ರಾಣಾ ಕಪೂರ್ ಅವರಿಗೆ ಮಾರಿದ್ದರು. ಈ ಚಿತ್ರ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರೂ ಪ್ರಿಯಾಂಕಾ ಗಾಂಧಿ ಚೆಕ್ ಮೂಲಕ 2 ಕೋಟಿ ಹಣ ಪಡೆದಿದ್ದರು.

ಇಡಿ ವಶದಲ್ಲಿರುವ ರಾಣಾ ಕಪೂರ್ ಅವರ ವಿಚಾರಣೆ ವೇಳೆ ಈ ವಿಚಾರ ಹೊರಬಿದ್ದಿದ್ದು, ಈ ನಿಟ್ಟಿನಲ್ಲಿ ಇಡಿ ಪೇಂಟಿಂಗ್ ಬಗ್ಗೆ ವಿಚಾರಣೆ ನಡೆಸುತ್ತಿದೆ. ರಾಜೀವ್ ಗಾಂಧಿ ಅವರ ಈ ಪೇಂಟಿಂಗ್ ಬೆಲೆ ಗೊತ್ತಿಲ್ಲ ಆದರೆ ಪ್ರಿಯಾಂಕಾ ಗಾಂಧಿ ಅವರಿಗೆ ರಾಣಾ ಕಪೂರ್ 2 ಕೋಟಿ ನೀಡಿದ್ದು ಹಲವು ಪ್ರಶ್ನೆ ಹುಟ್ತುಹಾಕಿದೆ. ಈ ವಿಚಾರ ಇದೀಗ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button