Kannada NewsKarnataka News
ಪ್ರಿಯಾಂಕಾ, ರಾಹುಲ್ ರನ್ನು ರಾಜಕೀಯಕ್ಕೆ ತರ್ತಾರಂತೆ ಸತೀಶ್ ಜಾರಕಿಹೊಳಿ

ತಮ್ಮ ದಾರಿಯಲ್ಲೇ ಅವರೂ ನಡೆಯಬೇಕೆನ್ನುವುದು ಸತೀಶ್ ಜಾರಕಿಹೊಳಿ ಬಯಕೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಾನು ರಾಜಕೀಯ, ಸಾಮಾಜಿಕ ಹಾಗೂ ಉದ್ಯಮ ರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಹಾಗೆಯೇ ರಾಹುಲ್, ಪ್ರಿಯಾಂಕಾ ಕೂಡ ನನ್ನ ಹಾಗೆ ಈ ಮೂರೂ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕನ್ನುವುದು ನನ್ನ ಬಯಕೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಇದೇನಿದು ರಾಹುಲ್, ಪ್ರಿಯಾಂಕಾ ಈಗಾಗಲೆ ರಾಜಕೀಯದಲ್ಲಿದ್ದಾರಲ್ಲ ಎನ್ನುತ್ತೀರಾ?
ಸತೀಶ್ ಜಾರಕಿಹೊಳಿ ಹೇಳಿದ್ದು ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಕುರಿತಾಗಿ ಅಲ್ಲ, ಅವರು ಹೇಳಿದ್ದು ತಮ್ಮ ಮಕ್ಕಳಾದ ಪ್ರಿಯಾಂಕಾ ಮತ್ತು ರಾಹುಲ್ ಕುರಿತು.
ಸತೀಶ್ ಜಾರಕಿಹೊಳಿ ಮಕ್ಕಳಾದ ಪ್ರಿಯಾಂಕಾ ಮತ್ತು ರಾಹುಲ್ ಇಬ್ಬರೂ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಇಬ್ಬರಿಗೂ ಈ ಮೂರೂ ಕ್ಷೇತ್ರಗಳಿಗೆ ಬೇಕಾದ ಕೌಶಲ್ಯವನ್ನು ಒದಗಿಸುತ್ತಿದ್ದಾರಂತೆ. ಅವರ ಅವುಗಳಲ್ಲಿ ಆಸಕ್ತಿಯನ್ನೂ ಹೊಂದಿದ್ದಾರಂತೆ. ಹಾಗಾಗಿ ತಮ್ಮ ದಾರಿಯಲ್ಲೇ ಅವರೂ ನಡೆಯಬೇಕೆನ್ನುವುದು ಸತೀಶ್ ಜಾರಕಿಹೊಳಿ ಬಯಕೆ.




