
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮರಾಠಿಗರ ಓಲೈಕೆ ರಾಜಕಾರಣಕ್ಕೆ ಬಿದ್ದ ರಾಜ್ಯ ಸರಕಾರ ಕನ್ನಡ ಪರ ಹೋರಾಟಗಾರರಿಗೆ ರೌಡಿ ಶೀಟರ್ ಪಟ್ಟ ನೀಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಇತ್ತೀಚೆಗೆ ಎಂಇಎಸ್ ಮುಖಂಡ ದೀಪಕ ದಳವಿ ಅವರ ಮುಖಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಪರ ಹೋರಾಟಗಾರರಾದ ಸಂಪತ್ ಕುಮಾರ್ ದೇಸಾಯಿ ಹಾಗೂ ಅನಿಲ ದಡ್ಡಿಮನಿ ಅವರ ವಿರುದ್ಧ ಪೊಲೀಸರು ರೌಡಿಶೀಟ್ ತೆರೆದಿದ್ದಾರೆ.
ಇತ್ತೀಚೆಗಷ್ಟೇ ನಡೆದ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಕನ್ನಡಿಗರಿಗೆ ಎಳ್ಳಷ್ಟೂ ಪ್ರಾಶಸ್ತ್ಯ ನೀಡದೆ ಕನ್ನಡಿಗರ ಅಸಮಾಧಾನಕ್ಕೆ ಗುರಿಯಾದ ಬೆನ್ನಲ್ಲೇ ಈ ಬೆಳವಣಿಗೆಯಿಂದ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಚುನಾವಣೆ ಹಿನ್ನೆಲೆಯಲ್ಲಿ ಎಪಿಎಂಸಿ ಪೊಲೀಸ್ ಠಾಣೆಯಿಂದ ಇಬ್ಬರೂ ಕನ್ನಡ ಪರ ಹೋರಾಟಗಾರರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದು, ಶಾಂತಿಭಂಗ ಮಾಡುವುದಿಲ್ಲ ಎಂದು ತಲಾ 50 ಸಾವಿರ ರೂ. ಮುಚ್ಚಳಿಕೆ ಪಡೆಯುವ ಬಗ್ಗೆ ನೋಟಿಸ್ ನಲ್ಲಿ ನಮೂದಿಸಿದ್ದರಿಂದ ಈ ಬೆಳವಣಿಗೆ ಬೆಳಕಿಗೆ ಬಂದಿದೆ.
ಬೆಳಗಾವಿಯಲ್ಲಿ ನಡೆಯುವ ಬಹುತೇಕ ಕನ್ನಡ ಪರ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಇಬ್ಬರೂ ಹೋರಾಟಗಾರರು ಈ ಹಿಂದೆ ಸಂಗೊಳ್ಳಿ ರಾಯಣ್ಣ ಪುತ್ಥಳಿ ವಿವಾದದಲ್ಲೂ ನೇತೃತ್ವ ವಹಿಸಿದ್ದರು.
ಪೊಲೀಸ್ ಇಲಾಖೆಯ ಈ ನಡೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಸರಕಾರದ ವಿರುದ್ಧದ ಆಕ್ರೋಶಕ್ಕೆ ಕಾರಣವಾಗಿದೆ. ಈ ಮುಖಂಡರ ಮೇಲಿನ ರೌಡಿಶೀಟ್ ವಾಪಸ್ ಪಡೆಯುವಂತೆ ಈಗಾಗಲೇ ಕನ್ನಡಿಗರ ವ್ಯಾಪಕ ಒತ್ತಾಯಗಳು ಕೇಳಿಬಂದಿದ್ದು, ಈ ಆಂದೋಲನಕ್ಕೆ ವೇದಿಕೆಯಾಗಿ ಪರಿಣಮಿಸಿದೆ.
#ನಾಡವಿರೋಧಿ ಸರಕಾರ ಎಂಬ ಹ್ಯಾಶ್ ಟ್ಯಾಗ್ ಅಡಿ ಭಾರೀ ಪ್ರಮಾಣದ ಪ್ರತಿಕ್ರಿಯೆಗಳು ರಾಜ್ಯದ ಬಿಜೆಪಿ ಸರಕಾರದ ವಿರುದ್ಧ ವ್ಯಕ್ತವಾಗುತ್ತಿದ್ದು ಇದು ಇಲ್ಲಿನ ಬಿಜೆಪಿ ನಾಯಕರು, ಜನಪ್ರತಿನಿಧಿಗಳ ಬುಡ ಅಲ್ಲಾಡುವಂತೆ ಮಾಡಿರುವುದಂತೂ ಸತ್ಯ.
*ಗೃಹ ಸಚಿವರಿಗೆ ರಕ್ಷಣೆ ಇಲ್ಲ ಅಂದ್ರೆ ಜನರ ಪರಿಸ್ಥಿತಿಯೇನಿರಬಹುದು?; ಡಿ.ಕೆ.ಶಿವಕುಮಾರ್ ಪ್ರಶ್ನೆ*
https://pragati.taskdun.com/d-k-shivakumarreactionamith-shahmangalore-visit/
*ಭೀಕರ ಅಪಘಾತ; ಮೂವರು ಯುವಕರು ಬಲಿ*
https://pragati.taskdun.com/bike-accidentthree-youth-deathdavanagere/
ಅದಾನಿ ಕಂಪನಿಯಲ್ಲಿ ವಿದೇಶಿ ಹೂಡಿಕೆ ಬಗ್ಗೆ ಸೆಬಿ ತನಿಖೆ
https://pragati.taskdun.com/sebi-probe-into-foreign-investment-in-adani-company/