Kannada NewsLatest

ಬೆಳಗಾವಿ ಕೆ ಎಲ್ ಇಯ ಪ್ರೊ.ಜಲಾಲಪೂರೆ ಸೇರಿದಂತೆ 14 ಅಧ್ಯಾಪಕರಿಗೆ ರಾಷ್ಟ್ರೀಯ ತಾಂತ್ರೀಕ ಶಿಕ್ಷಕರ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ;ನವದೆಹಲಿ: ಅಖಿಲ ಭಾರತ ತಾಂತ್ರೀಕ ಶಿಕ್ಷಣ ಮಂಡಳಿ (ಎಐಸಿಟಿಇ)- ಅನುಮೋದಿತ ಸಂಸ್ಥೆಗಳಲ್ಲಿನ ಅಧ್ಯಾಪಕರ ಶ್ರೇಷ್ಠತೆಯನ್ನು ಗುರುತಿಸಲು ಅಖಿಲ ಭಾರತ ತಾಂತ್ರೀಕ ಶಿಕ್ಷಣ ಮಂಡಳಿಯು ರಾಷ್ಟ್ರೀಯ ತಾಂತ್ರೀಕ ಶಿಕ್ಷಕರ ಪ್ರಶಸ್ತಿ (ಎನ್‌ಟಿಟಿಎ)-2022 ಅನ್ನು ಪರಿಚಯಿಸಲಾಗಿದೆ.

ಈ ಪ್ರಶಸ್ತಿಯನ್ನು ಸೆಪ್ಟೆಂಬರ್ 6ರಂದು ದೆಹಲಿಯ ಡಾ. ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರದಲ್ಲಿ 14 ಅಧ್ಯಾಪಕರಿಗೆ ನೀಡಲಾಯಿತು. ಈ ವರ್ಷ ಔಷಧೀಯ ವಿಭಾಗದಲ್ಲಿ ಅಖಿಲ ಭಾರತ ತಾಂತ್ರೀಕ ಶಿಕ್ಷಣ ಮಂಡಳಿಯು (ಎಐಸಿಟಿಇ) ರಾಷ್ಟ್ರೀಯ ತಾಂತ್ರಿಕ ಶಿಕ್ಷಕ ಪ್ರಶಸ್ತಿಯನ್ನು ಪ್ರೋ. (ಡಾ.) ಸುನೀಲ್ ಜಲಾಲಪೂರೆ ಅವರಿಗೆ ನೀಡಲಾಗಿದೆ. ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ಪ್ರಶಸ್ತಿ ಪ್ರದಾನ ಸಮಾರಂಭದ ಹಿಂದಿನ ದಿನದಂದು ಎಲ್ಲಾ ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ನಡೆಸಿದರು. ಪ್ರತಿ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು.

ಶಿಕ್ಷಣ ಸಚಿವೆ ಅನ್ನಪೂರ್ಣದೇವಿ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಡಾ. ಸುಭಾಸ್ ಸರ್ಕಾರ್, ಡಾ.ರಾಜಕುಮಾರ ರಜತಸಿಂಗ್ ಮತ್ತು ಡಾ. ಜಗದೇಶ್ ಕುಮಾರ, ಯುಜಿಸಿ ಅಧ್ಯಕ್ಷರು ಇವರು ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದರು. ತಾಂತ್ರೀಕ ಶಿಕ್ಷಣದಲ್ಲಿ ಇವರ ಬೋಧನೆ ಮತ್ತು ಸಂಶೋಧನಾ ಶ್ರೇಷ್ಠತೆಯನ್ನು ಗುರುತಿಸಿ ಅಖಿಲ ಭಾರತ
ತಾಂತ್ರೀಕ ಶಿಕ್ಷಣ ಮಂಡಳಿಯು ಈ ಪ್ರಶಸ್ತಿಯನ್ನು ನೀಡಿದೆ.

ಪ್ರೋ. ಜಲಾಲಪೂರೆಅವರು ಪ್ರಸ್ತುತ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಔಷಧೀಯ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಬೋಧನೆ ಮತ್ತು ಸಂಶೋಧನೆಯಲ್ಲಿ 24 ವರ್ಷಗಳ ಶ್ರೀಮಂತ ಅನುಭವವನ್ನು ಹೊಂದಿದ್ದಾರೆ ಮತ್ತು ಅವರ ಸಂಶೋಧನಾ ಆಸಕ್ತಿಗಳ ಕ್ಷೇತ್ರಗಳು ಔಷಧದ ಆವಿಷ್ಕಾರ ಮತ್ತು ಔಷಧಿಯ ಸಸ್ಯಗಳಿಂದ ಅಭಿವೃದ್ಧಿ, ನ್ಯಾನೊಪರ್ಟಿಕಲ್ ಡ್ರಗ್ ವಿತರಣಾ ವ್ಯವಸ್ಥೆ ಮತ್ತು ಹಸಿರು ನ್ಯಾನೊತಂತ್ರಜ್ಞಾನವನ್ನು ಒಳಗೊಂಡಿದೆ. ಪ್ರೋ. ಜಲಾಲಪೂರೆ ಅವರು ರಾಷ್ಟ್ರೀಯಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕಗಳಲ್ಲಿ 147 ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ ಮತ್ತು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ 84 ಪ್ರಬಂಧಗಳನ್ನು ಮಂಡಿಸಿದ್ದಾರೆ. ರೂ. 1 ಕೋಟಿಗೂ ಅಧಿಕ ಆರ್ಥಿಕ ನೆರವು ಪಡೆದಿದ್ದಾರೆ. ಸಂಶೋಧನಾ ಯೋಜನೆಗಳಿಗಾಗಿ ಯುಜಿಸಿ, ಎಐಸಿಟಿಇ, ಡಿಎಸ್‌ಟಿ ಮತ್ತು ಐಸಿಎಮ್‌ಆರ್ ನಂತಹ ಹಲವಾರು ಧನಸಹಾಯ ಸಂಸ್ಥೆಗಳಿಂದ ಧನಸಹಾಯ ಪಡೆದಿದ್ದಾರೆ.

ಪ್ರೋ. ಜಲಾಲಪೂರೆ ಅವರು 18 ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಮಾರ್ಗದರ್ಶನ ಮಾಡಿದ್ದಾರೆ ಮತ್ತು 48 ಎಮ್. ಫಾರ್ಮ್ ಸ್ನಾತ್ತಕೋತ್ತರ ವಿದ್ಯಾರ್ಥಿಗಳು, ಒಬ್ಬ ಪೋಸ್ಟ್ಡಾಕ್ಟರಲ್ ಫೆಲೋಶಿಪ್‌ದವರಿಗೆ ತಮ್ಮ ಸಂಶೋಧನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಮಾರ್ಗದರ್ಶನ ಮಾಡಿದ್ದಾರೆ. ಪ್ರೋ. ಜಲಾಲಪೂರೆ ಅವರು 4 ಪುಸ್ತಕಗಳು ಮತ್ತು 1 ಪುಸ್ತಕ ಅಧ್ಯಾಯವನ್ನು ಬರೆದಿದ್ದಾರೆ. ಅವರು ತಮ್ಮ ಕ್ರೆಡಿಟ್ ಗೆ  5 ಬೌದ್ಧಿಕ ಆಸ್ತಿ ಹಕ್ಕುಗಳನ್ನು ಹೊಂದಿದ್ದಾರೆ. ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಡಾ. ಪ್ರಭಾಕರ್ ಕೋರೆ ಅವರು ಪ್ರೋ.ಜಲಾಲಪೂರೆ ಅವರನ್ನು ಅಭಿನಂದಿಸಿದ್ದಾರೆ.

ವಿಶಿಷ್ಟ ಸಹಿಯಿಂದಲೇ ಖ್ಯಾತರಾಗಿದ್ದ ಅಧಿಕಾರಿ ನಿಧನ

https://pragati.taskdun.com/latest/signature-shanthayyapassed-away/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button