ರೈಲ್ವೆಯಲ್ಲಿ ಪ್ಲ್ಯಾಸ್ಟಿಕ್ ಬಳಕೆ ನಿಷೇಧ -ಸುರೇಶ ಅಂಗಡಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಪ್ರಧಾನಮಂತ್ರಿಯವರು ಈ ಸ್ವಾತಂತ್ರ್ಯ ದಿನದಂದು ಸ್ವಚ್ಚ ಭಾರತದ ಅಭಿಯಾನದ ಆಯಾಮವನ್ನು ವಿಸ್ತರಿಸಿ ಪ್ರಸಕ್ತ ವರ್ಷದಲ್ಲಿ ಭಾರತವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಲು ಕರೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅಕ್ಟೋಬರ್ 2ರಿಂದ, ಅಂದರೆ ಗಾಂಧೀ ಜಯಂತಿಯ ದಿನದಿಂದ ರೈಲ್ವೆ ಇಲಾಖೆಯಲ್ಲಿ Single Use Plastic ಬಳಕೆ ನಿಷೇಧ ಜಾರಿಗೆ ಬರಲಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವರು ಸುರೇಶ ಅಂಗಡಿ ತಿಳಿಸಿದ್ದಾರೆ .
ಸ್ವಚ್ಚತೆಯೇ ಸೇವೆ ಅಭಿಯಾನವು ೧೧.೦೯.೨೦೧೯ರಿಂದ ಆರಂಭವಾಗಿದ್ದು, ಎಲ್ಲರ ಸಕ್ರಿಯ ಪಾಲ್ಗೊಳ್ಳುವಿಕೆಗೆ ಸುರೇಶ ಅಂಗಡಿ ಕರೆ ನೀಡಿದ್ದಾರೆ. ರೈಲ್ವೆ ಇಲಾಖೆಯು Single Use Plastic ನಿಷೇಧ, ಪ್ಲಾಸ್ಟಿಕ್ ಬಾಟಲಿಗಳ ಮರುಬಳಕೆ (Recycling), ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಕ್ರಶಿಂಗ್ ಯಂತ್ರಗಳ ಅಳವಡಿಕೆ ಮೊದಲಾದ ಕ್ರಮಗಳನ್ನು ಕೈಗೊಳ್ಳಲಿದೆ.
ರೈಲ್ವೆ ಇಲಾಖೆಯಲ್ಲಿ ಪ್ಲಾಸ್ಟಿಕ್ ವಿರುದ್ಧ ಬೃಹತ್ತಾದ ಸಮರವನ್ನು ಸಾರಿ, ಸ್ವಚ್ಚ ಭಾರತದ ಯೋಜನೆಯನ್ನು ಸಾಕಾರಗೊಳಿಸಲು ಮಹತ್ವದ ಯೋಗದಾನ ಇಲಾಖೆ ನೀಡಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಅಭಿವೃದ್ದಿ ಮತ್ತು ಪರಿಸರ ಕಾಳಜಿಯನ್ನು ಜೊತೆಯಾಗಿರಿಸಿ ಭಾರತೀಯ ರೈಲ್ವೆ ಮುಂದುವರೆಯಲಿದೆ ಎಂದು ಅಂಗಡಿ ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ