Kannada NewsKarnataka NewsLatest

ರಾತ್ರಿ 9 ರಿಂದ 12 ಗಂಟೆಯವರೆಗೆ ನಿಷೇಧಾಜ್ಞೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಂದು ರಾತ್ರಿ 9 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರಗೆ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಬೆಳಗಾವಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಬೆಳಗಾವಿಯಲ್ಲಿ ಕರೋನಾ ವೈರಸ್ ಹರಡದಂತೆ ಮುಂಜಾಗೃತಾ ಕ್ರಮವಾಗಿ ಕಲಂ. ೧೪೪ ಸಿಆರ್‌ಪಿಸಿ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೋವಿಡ್-೨೦೧೯ (ಕೋವಿಡ್-೨೦೧೯ (ಕರೊನಾ ವೈರಸ್ ಕಾಯಿಲೆ-೨೦೧೯) ನೇದ್ದರ ಹರಡುವುದನ್ನು ತಡೆಯಲು, ಸಾರ್ವಜನಿಕರ ಹಿತದೃಷ್ಟಿಯಿಂದ ದಿನಾಂಕ:೨೨-೦೩-೨೦೨೦ ರಂದು ರಾತ್ರಿ ೦೯  ಗಂಟೆಯಿಂದ ಮಧ್ಯರಾತ್ರಿ ೧೨  ಗಂಟೆಯವರೆಗೆ ಬೆಳಗಾವಿ ನಗರ/ಬೆಳಗಾವಿ ತಾಲೂಕು ವ್ಯಾಪ್ತಿಯಲ್ಲಿ ಸಿ.ಆರ್.ಪಿಸಿ ೧೯೭೩ ರ ಕಲಂ.೧೪೪ ಪ್ರಕಾರ ನಿಷೇದಾಜ್ಞೆಯನ್ನು ಜಾರಿಗೊಳಿಸಿ, ಈ ಕೆಳಗಿನಂತೆ ಷರತ್ತುಗಳನ್ನು ವಿಧಿಸಲಾಗಿದೆ.
೧. ೫ ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಿದೆ.
೨. ಜನರು ಅನಗತ್ಯವಾಗಿ ಮನೆಯಿಂದ ಹೊರಬಂದು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದು, ಅಂಗಡಿ ಮುಂಗಟ್ಟುಗಳನ್ನು ತೆರೆಯುವುದನ್ನು ಹಾಗೂ ವಾತಾವರಣವನ್ನು ಕಲುಷಿತಗೊಳಿಸುವಂತಹ ಎಲ್ಲ ರೀತಿಯ ಕೃತ್ಯಗಳನ್ನು ನಿಷೇಧಿಸಿದೆ.
೩. ಪ್ರತಿಯೊಬ್ಬರು ಕಟ್ಟು ನಿಟ್ಟಾಗಿ ಕನಿಷ್ಠ ೦೬ ಅಡಿ ಅಂತರ ಕಾಯ್ದುಕೊಳ್ಳುವುದು.
ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಪ್ರಕ್ರೀಯೆ ಸಂಹಿತೆಯ ಕಲಂ ೧೮೮ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದೆಂದು ಈ ಮೂಲಕ ಸೂಚಿಸಿದ್ದು, ಬೆಳಗಾವಿ ನಗರ ಹಾಗೂ ಬೆಳಗಾವಿ ತಾಲೂಕಾ ಸಾರ್ವಜನಿಕರ ಹಿತ ದೃಷ್ಠಿಯಿಂದ ಹೊರಡಿಸಿ ಈ ಆದೇಶವನ್ನು ಎಲ್ಲ ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಿ ಸಹಕರಿಸುವಂತೆ ಸೂಚಿಸಲಾಗಿದೆ.

ಇಂದು ಇಡೀ ದಿನ ಜನತಾ ಕರ್ಫ್ಯೂ ಪಾಲಿಸಿ ರಾತ್ರಿ ಜನರು ಮನೆಯಿಂದ ಹೊರಗೆ ಬಂದು ಗುಂಪು ಸೇರಿದಲ್ಲಿ ಎಲ್ಲವೂ ವ್ಯರ್ಥವಾಗಲಿದೆ. ಇದರಿಂದ ಕೊರೋನಾ ವೈರಸ್ ಹರಡುವ ಅಪಾಯವಿರುತ್ತದೆ. ಹಾಗಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಲೋಕೇಶ್ ಕುಮಾರ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.

ಇಂದು ಮಧ್ಯರಾತ್ರಿ 12 ಗಂಟೆಯಿಂದ ಮಾ.31ರವರೆಗೆ ರಾಜ್ಯ ಸರಕಾರವೇ ಲಾಕ್ ಡೌನ್ ಆದೇಶ ಹೊರಡಿಸಿದೆ. ಹಾಗಾಗಿ ಮತ್ತೆ ನಿಷೇಧಾಜ್ಞೆ ಹೊರಡಿಸಬೇಕಾಗಿಲ್ಲ.

ನಾಳೆಯಿಂದ ಬೆಳಗಾವಿ ಸೇರಿದಂತೆ 9 ಜಿಲ್ಲೆಗಳು ಲಾಕ್ ಡೌನ್; ನಾಳೆಯೂ ಬಸ್ ಸಂಚಾರ ಇಲ್ಲ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button