ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ಮೇ 27 ರಂದು ಅಂತಿಮ ವರ್ಷದ ಯುಜಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಪ್ರಾಜೆಕ್ಟ್ ಪ್ರದರ್ಶನ “ಪ್ರಾಜೆಕ್ಟ್ ಎಕ್ಸ್‌ಪೋ-2023” ರಲ್ಲಿ 250ಕ್ಕೂ ಹೆಚ್ಚು ಅತ್ಯಾಧುನಿಕ ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಲಾಯಿತು.
ಬೆಂಗಳೂರಿನ ಇಸ್ರೋ ಉಪಗ್ರಹ ಕೇಂದ್ರದ ಕಂಟ್ರೋಲ್ ಡೈನಾಮಿಕ್ಸ್ ಮತ್ತು ಅನಾಲಿಸಿಸ್‌ನ ಖ್ಯಾತ ವಿಜ್ಞಾನಿ ಮತ್ತು ಉಪ ವಿಭಾಗದ ಮಾಜಿ ಮುಖ್ಯಸ್ಥ ಡಾ.ವೆಂಕಟೇಶ್ವರಲು ಅಂದ್ರ ಈ ಮೆಗಾ ಪ್ರಾಜೆಕ್ಟ್ ಎಕ್ಸ್‌ಪೋವನ್ನು ಉದ್ಘಾಟಿಸಿ, ವೈದ್ಯಕೀಯ ವಿಜ್ಞಾನ, ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ ಮುಂತಾದ ಹಲವಾರು ತಂತ್ರಜ್ಞಾನದ ಅವಶ್ಯಕತೆ ಕುರಿತು ಮಾತನಾಡಿದರು.
ಮುಂಬರುವ ದಶಕದಲ್ಲಿ ಕೃತಕ ಬುದ್ಧಿಮತ್ತೆಯು ಪ್ರಮುಖ ತಂತ್ರಜ್ಞಾನವಾಗಲಿದೆ, ವಿದ್ಯಾರ್ಥಿಗಳು ಈ ದಿಸೆಯಲ್ಲಿ ಮುಂದುವರಿಯಬಹುದು ಎಂದು ಪ್ರೇರೇಪಿಸಿದರು ಮತ್ತು ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್‌ಗಳನ್ನು ಪ್ರಸ್ತುತಪಡಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿವಿಧ ಇಂಜಿನಿಯರಿಂಗ ಮತ್ತು ಆರ್ಕಿಟೆಕ್ಚರ್ ವಿಭಾಗಗಳ 16 ಪ್ರಾಜೆಕ್ಟ್‌ಗಳನ್ನು ವರ್ಷದ ಅತ್ಯುತ್ತಮ ಪ್ರಾಜೆಕ್ಟ್‌ಗಳಾಗಿ ಆಯ್ಕೆ ಮಾಡಲಾಯಿತು ಮತ್ತು ಬಹುಮಾನಗಳೊಂದಿಗೆ ಪುರಸ್ಕರಿಸಲಾಯಿತು.
ವಿವಿಧ ಪಿಯು ಮತ್ತು ಡಿಪ್ಲೊಮಾ ಕಾಲೇಜುಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಎಕ್ಸ್‌ಪೋಗೆ ಸಾಕ್ಷಿಯಾದರು. ಕೆಎಲ್‌ಎಸ್ ಜಿಐಟಿಯ ಪ್ರಾಂಶುಪಾಲರಾದ ಪ್ರೊ.ಡಿ.ಎ.ಕುಲಕರ್ಣಿ, ಸಂಘಟನಾ ತಂಡ ಮತ್ತು ಭಾಗವಹಿಸಿದ ಹಾಗೂ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ