GIT add 2024-1
Laxmi Tai add
Beereshwara 33

ವಿಟಿಯುದಲ್ಲಿ ಬಾಳೆಕುಂದ್ರಿ ಅಧ್ಯಯನ ಪೀಠ ಸ್ಥಾಪನೆಗೆ ಪ್ರಸ್ತಾವನೆ

ಜಲಸಂಪನ್ಮೂಲ ಇಲಾಖೆಗೆ ವಿಟಿಯು ಕುಲಪತಿ ಕರಿಸಿದ್ದಪ್ಪ ಪತ್ರ

Anvekar 3
Cancer Hospital 2

Pragativahini Exclusive

10 ಕೋಟಿ ರೂ. ಮಂಜೂರಿಗೆ ಪ್ರಸ್ತಾವನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎಸ್. ಜಿ, ಬಾಳೇಕುಂದ್ರಿ ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು ಎನ್ನುವ ಪ್ರಸ್ತಾವನೆಯನ್ನು ವಿಶ್ವವಿದ್ಯಾಲಯದ ಕುಲಪತಿ ಕರಿಸಿದ್ದಪ್ಪ ಜಲಸಂಪನ್ಮೂಲ ಇಲಾಖೆಗೆ ಸಲ್ಲಿಸಿದ್ದಾರೆ.

ಈ ಕುರಿತು ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿಗೆ ಅವರು ಪತ್ರ ಬರೆದಿದ್ದಾರೆ. ಪೀಠದ ಪರಿಣಾಮಕಾರಿ ಅನುಷ್ಠಾನಕ್ಕಾಗಿ 10 ಕೋಟಿ ರೂ.ಗಳನ್ನು ಮೀಸಲಿಡಬೇಕು ಎಂದೂ ಅವರು ಕೋರಿದ್ದಾರೆ.

ಬೆಳಗಾವಿಯ ದಿ ಇನ್ನಿಟ್ಯೂಶನ್ ಆಫ್ ಎಂಜಿನಿಯರ್ಸ್ ಈ ಸಂಬಂಧ ಮನವಿಯನ್ನು ಸಲ್ಲಿಸಿತ್ತು. ಅದನ್ನು ಉಲ್ಲೇಖಿಸಿ ಕರಿಸಿದ್ದಪ್ಪ ಈ ಪತ್ರ ಬರೆದಿದ್ದಾರೆ.
Emergency Service
  ಕರ್ನಾಟಕದ ಶ್ರೇಷ್ಠ, ನೀರಾವರಿ ತಜ್ಞ ಇಂಜಿನಿಯರ್ ಹಾಗೂ ಕನ್ನಡ ನಾಡು ಕಂಡ ಅವರೂಪದ ತಂತ್ರಜ್ಞ  ಎಸ್. ಜಿ. ಬಾಳೆಕುಂದ್ರಿಯವರ ಕೊಡುಗೆ ಅನನ್ಯ ಹಾಗೂ ಅವಿಸ್ಮರಣೀಯ. ಮುಖ್ಯ ಇಂಜಿನಿಯರ್ ಆಗಿ ಬೃಹತ್ ನೀರಾವರಿ ಯೋಜನೆಗಳ ರೂಪುರೇಷೆಗಳ ಯೋಜನೆ ಹಾಗೂ ಅನುಷ್ಠಾನದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಇವರು ವಿಶೇಷವಾಗಿ ಕರ್ನಾಟಕದಲ್ಲಿ ತಾಂತ್ರಿಕ ವಿಶ್ವವಿದ್ಯಾಲಯ ಪ್ರಾರಂಭಿಸುವ ಕುರಿತು ಸರ್ಕಾರ ನೇಮಿಸಿದ ಏಕಸದನ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.  ಬೆಳಗಾವಿಯಲ್ಲಿ ವಿಶ್ವೇಶ್ವಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪನೆಯಲ್ಲಿ ಅಮೂಲ್ಯ ಪಾತ್ರವನ್ನು ಸಹ ವಹಿಸಿದ್ದರು, ಇಷ್ಟೊಂದು ಅಮೋಘ ಕೊಡುಗೆ ನೀಡಿದ ಅವರ ಜೀವನ ಮೌಲ್ಯಗಳು, ಆದರ್ಶ ಹಾಗೂ ಪ್ರಾಮಾಣಿಕ ನಿಸ್ವಾರ್ಥ ಸೇವೆ ಅನುಕರಣೀಯ ಮತ್ತು ಪ್ರಸ್ತುತ ಹಾಗೂ ಮುಂದಿನ ಪೀಳಿಗೆಗೆ ಪ್ರೋತ್ಸಾಹದಾಯಕವಾಗಿದೆ.
 ಪ್ರಸ್ತುತ ನೀರಾವರಿ ವಲಯದಲ್ಲಿ ಆಗುತ್ತಿರುವ ಸಂಶೋಧನೆಗಳ ವಿಶೇಷ ಅಧ್ಯಯನಕ್ಕೆ ವಿಪುಲ ಅವಕಾಶಗಳನ್ನು ಸೃಷ್ಟಿಸಿವೆ. ಆದ್ದರಿಂದ  ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದಲ್ಲಿ ದಿ. ಎಸ್. ಜಿ. ಬಾಳೇಕುಂದ್ರಿ ಅಧ್ಯಯನ ಪೀಠವನ್ನು ಸ್ಥಾಪನೆ ಮಾಡಬೇಕು ಹಾಗೂ ಇದರ ಉದ್ದೇಶಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರೂ. 5 ಕೋಟಿ  ಹಾಗೂ ಅದರ ಉದ್ದೇಶಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ 5 ಕೋಟಿ ರೂಗಳನ್ನು ಮಂಜೂರು ಮಾಡಬೇಕೆಂದು  ಕರಿಸಿದ್ದಪ್ಪ ಕೋರಿದ್ದಾರೆ. 
ಈ ಬಗ್ಗೆ ಈಗಿನ  ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸಹ ದಿನಾಂಕ ೨೬-೧೧-೨00೮ ರಲ್ಲಿ ವಿಧಾನ ಸಭೆಯ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಎಸ್. ಜಿ. ಬಾಳೇಕುಂದ್ರಿ ಪ್ರಶಸ್ತಿ ಸಮಾರಂಭದಲ್ಲಿ ಪೀಠ ಸ್ಥಾಪನೆ ಬಗ್ಗೆ ಪ್ರಸ್ತಾಪ ಮಾಡಿದ್ದರು ಎಂದೂ ಉಲ್ಲೇಖಿಸಿದ್ದಾರೆ.
ಅಧ್ಯಯನ ಪೀಠ ಸ್ಥಾಪನೆಯ ಉದ್ದೇಶಗಳು:
1. ಘಟಪ್ರಭಾ ಮತ್ತು ಮಲಪ್ರಭಾ ಅಣೆಕಟ್ಟುಗಳ ಹಾಗೂ ಜಲಾನಯನ ಪ್ರದೇಶಗಳ ಯೋಜನೆ, ವಿನ್ಯಾಸ ಮತ್ತು ನಿರ್ವಹಣಿಗಳ ಮೇಲೆ ಹವಾಮಾನ ಬದಲಾವಣೆಯಿಂದ ಆಗುವ ಪರಿಣಾಮಗಳ ಕುರಿತು ಅಧ್ಯಯನಗಳನ್ನು ನಡೆಸುವುದು.
2.  ಹವಾಮಾನ ಬದಲಾವಣೆಗಳಿಗೆ ತಕ್ಕಂತೆ ಹಾಗೂ ಅದರ ಪರಿಣಾಮಗಳಿಗೆ ಹೊಂದಿಕೊಳ್ಳಲು ಜಲಸಂಪನ್ಮೂಲ ವ್ಯವಸ್ಥೆಗಳ ವಿನ್ಯಾಸಗಳ ಮಾನದಂಡ ಹಾಗೂ ಮಾದರಿ ಗಳನ್ನು ಪರಿಶೀಲಿಸಲು ಮತ್ತು ಪರಿಣಾಮವನ್ನು ಸರಿಹೊಂದಿಸಲು ಅಗತ್ಯ ಬದಲಾವ ಣೆಗಳು / ಮಾರ್ಪಾಡುಗಳನ್ನು ಸೂಚಿಸುವುದು.
3, ಘಟಪ್ರಭಾ ಮತ್ತು ಮಲಪ್ರಭಾ ಜಲಾನಯನ ಪ್ರದೇಶಗಳಲ್ಲಿ ಭವಿಷ್ಯದಲ್ಲಿನ ಜಲ ಸಂಪನ್ಮೂಲದ ಲಭ್ಯತೆ ಹಾಗೂ ಉತ್ಪಾದನೆ ಕುರಿತು ಅಧ್ಯಯನ .
4, ಹೊಸ ತಂತ್ರಜ್ಞಾನಗಳಾದ ಸೂಕ್ಷ್ಮ ನೀರಾವರಿ ಪ್ರಿಸಿಶನ್ ಫಾರ್ಮಿನ್ನ ಗಳ ಹಾಗೂ ಇತರೆ ಹೊಸ ವಿಷಯಗಳ ಬಗ್ಗೆ ಕೃಷಿಕರಿಗೆ ತರಬೇತಿಯನ್ನು ನೀಡಿ ಕೃಷಿಕರ ಆದಾಯ ವನ್ನು ದ್ವಿಗುಣಗೊಳಿಸುವುದು.
5. ವಿನ್ಯಾಸ,ಮೇಲ್ವಿಚಾರಣೆ, ಮೌಲ್ಯಮಾಪನ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಾಗಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಜಲ ಸಂಪನ್ಮೂಲ ಇಲಾಖೆ ಎಂಜಿನಿಯರ್‌ಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು,
6. ಜಲ ಸಂಪನ್ಮೂಲ ಇಂಜಿನಿಯರಿಂಗ್ ವಿಭಾಗದಲ್ಲಿ ಬರುವ ಸಮರ್ಸ್ಯಗಳಿಗೆ ಹೊಸ ತಂತ್ರ ಜ್ಞಾನಗಳ ಮೂಲಕ ಆವಿಷ್ಕಾರಗಳನ್ನು ನಡೆಸುವುದು.
Bottom Add3
Bottom Ad 2