
ಪ್ರಗತಿವಾಹಿನಿ ಸುದ್ದಿ: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಸಂಬಂಧ ಬಿಜೆಪಿ ಕಾರ್ಯಕರ್ತರು, ಭಜರಂಗ ದಳ ಹಾಗೂ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಈ ವೇಳೆ ಹೈಡ್ರಾಮಾ ಸೃಷ್ಟಿಯಾಗಿದೆ.
ಮದ್ದೂರು ಪಟ್ಟಣದ ಕೋಟೆ ಬೀದಿಯ ಉಗ್ರನರಸಿಂಹಸ್ವಾಮಿ ದೇವಸ್ಥಾನದ ಆವರಣದಿಂದ ಮೆರವಣಿಗೆ ಹೋರಾಟ ಸಾವಿರಾರು ಹಿಂದೂ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿ ಸಿಎಂ ಸಿದ್ದರಾಮಯ್ಯ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ ಪ್ರತಿಭಟನಾ ಮೆರವಣಿಗೆ ಮಸೀದಿ ಸಮೀಪಿಸಿದ ವೇಳೆ, ರೊಚ್ಚಿಗೆದ್ದ ಕಾರ್ಯಕರ್ತರು ಮಸೀದಿ ಮುಂಭಾಗ ಟೈರುಗಳಿಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿದ್ದಾರೆ.
ಈ ವೇಳೆ ಶಾಂತಿ ಕಡದದಂತೆ ಜಿಲ್ಲಾಧಿಕಾರಿ ಕುಮಾರ ಮತ್ತು ಎಸ್ಪಿ ಮಲ್ಲಿಕಾರ್ಜನು ಬಾಲದಂಡಿ ಅವರು ಪ್ರತಿಭಟನಾಕಾರರ ಬಳಿ ಮನವಿ ಮಾಡಿದ್ದು ಅಲ್ಲಿಂದ ಮುಂದೆ ಸಾಗುವಂತೆ ಹೇಳಿದ್ದಾರೆ. ಆದ್ರೆ ಇದಕ್ಕೆ ಸೊಪ್ಪು ಹಾಕದ ಪ್ರತಿಭಟನಾಕಾರರು ಸುಮಾರು ಅರ್ಥ ಗಂಟೆಗಳ ಕಾಲ ಮಸೀದಿಯ ಮುಂದೆಯೇ ಜಮಾಯಿಸಿ ಧಿಕ್ಕಾರ ಕೂಗಿದ್ದಾರೆ. ಈ ವೇಳೆ ಅನಿವಾರ್ಯವಾಗಿ ಪೊಲೀಸರು ಲಾಠಿ ಚಾರ್ಜ್ ನಡೆಸಿ, ಕಾರ್ಯಕರ್ತರನ್ನು ಚದುರಿಸಿದ್ದಾರೆ. ಸದ್ಯ ಪರಿಸ್ಥತಿ ನಿಭಾಯಿಸಲು ಸ್ಥಳದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
21 ಜನರ ಬಂಧನ
ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಒಟ್ಟು 21 ಜನರನ್ನು ಬಂಧಿಸಲಾಗಿದೆ. ಮೊಹಮ್ಮದ್ ಇರ್ಫಾನ್ ಅಲಿಯಾಸ್ ಮಿಯಾ, ಮೊಹಮ್ಮದ್ ಆವೇಜ್, ನವಾಜ್ ಖಾನ್ ಅಲಿಯಾಸ್ ನವಾಜ್, ಇಮ್ರಾನ್ ಪಾಷಾ ಅಲಿಯಾಸ್ ಇಮ್ರಾನ್, ಉಮರ್ ಫಾರೂಕ್ ಅಲಿಯಾಸ್ ಉಮರ್, ಸಯ್ಯದ್ ದಸ್ತಗಿರ್ ಅಲಿಯಾಸ್ ಸಯ್ಯದ್ ರಶೀದ್, ಖಾಸಿಫ್ ಅಹ್ಮದ್ ಅಲಿಯಾಸ್ ಖಾಸಿಫ್, ಅಹ್ಮದ್ ಸಲ್ಮಾನ್, ಅಲಿಯಾಸ್ ಮುಕ್ಕುಲ್ಲಾ, ಮುಸವೀರ್ ಪಾಷಾ ಅಲಿಯಾಸ್ ಒಡೆಯ, ಕಲಾಂದರ್ ಖಾನ್, ಸುಮೇರ್ ಪಾಷಾ, ಮೊಹಮ್ಮದ್ ಅಜೀಜ್ ಇನಾಯತ್ ಪಾಷಾ, ಮೊಹಮ್ಮದ್ ಖಲೀಂ ಅಲಿಯಾಸ್ ಕೈಫ್ ಎನ್ನುವರನ್ನು ಬಂಧಿಸಲಾಗಿದೆ.