Kannada NewsLatest

ಸುರೇಶ ಅಂಗಡಿ ವಿರುದ್ದ ಬುಗಿಲೆದ್ದ ಆಕ್ರೋಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಮರಾಠಿ ಭಾಷಿಕರನ್ನು ಮೆಚ್ಚಿಸಲು ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸದ ಕೇಂದ್ರ ಸಚಿವ ಸುರೇಶ ಅಂಗಡಿ ವಿರುದ್ದ ಕನ್ನಡ ಸಂಘಟನೆಗಳು ಪ್ರತಿಭಟನೆಗಿಳಿದಿವೆ.

ರಾಜ್ಯದ ಎಲ್ಲ ಸಂಸದರೂ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರೂ ಸುರೇಶ ಅಂಗಡಿ ಮಾತ್ರ ಇಂಗ್ಲಿಷ್ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಉದ್ದೇಶಪೂರ್ವಕವಾಗಿ ಅಂಗಡಿ ಕನ್ನಡ ವಿರೋಧಿ ನಿಲುವು ತಳೆದಿದ್ದಾರೆ ಎಂದು ಕರವೆ ಕಿಡಿ ಕಾರಿದ್ದು, ಅಂಗಡಿ ಪ್ರತಿಕೃತಿ ದಹನ ಮಾಡಿದೆ.

Home add -Advt

ಸುರೇಶ ಅಂಗಡಿ ಮೊದಲಿನಿಂದಲೂ ಕನ್ನಡ ವಿರೋಧಿ ನಿಲುವು ತಳೆಯುತ್ತ ಬಂದಿದ್ದಾರೆ. ಮಹಾನಗರ ಪಾಲಿಕೆ ಮೇಲಿನ ಎಂಇಎಸ್ ಧ್ವಜ ತೆರವುಗೊಳಿಸಿದಾಗಲೂ ಪ್ರತಿಭಟನೆಗಿಳಿದಿದ್ದರು. ಅವರ ಈ ವರ್ತನೆ ಸಹನೀಯವಲ್ಲ ಎಂದು ಕರವೆ ಮುಖಂಡರು ಕಿಡಿಕಾರಿದರು.

ಮಹಾದೇವ ತಳವಾರ, ಗಣೇಶ ರೋಖಡೆ, ದೀಪಕ ಗುಡಗನಟ್ಟಿ ಮೊದಲಾದವರಿದ್ದರು.

ಕನ್ನಡ ಹೋರಾಟಗಾರ ಅಶೋಕ ಚಂದರಗಿ ಸಹ ಅಂಗಡಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಇದೇ ರೀತಿ ಮುಂದುವರಿದರೆ ಅವರ ಸಚಿವ ಸ್ಥಾನಕ್ಕೇ ಕುತ್ತು ಬಂದೀತು ಎಂದು ಎಚ್ಚರಿಸಿದ್ದಾರೆ.

 

Related Articles

Back to top button