ಪ್ರಗತಿವಾಹಿನಿ ಸುದ್ದಿ, ಗೋಕಾಕ -ವಿಜಯನಗರ ಜಿಲ್ಲೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕ್ರಿಯೆ ಶುರು ಮಾಡುತ್ತಿದ್ದಂತೆ ವಿವಿಧೆಡೆ ಪ್ರತಿಭಟನೆ ಶುರುವಾಗಿದೆ. ಜಿಲ್ಲಾ ವಿಭಜನೆಗಾಗಿ ಕಳೆದ 2 ದಶಕಗಳಿಗೂ ಹೆಚ್ಚು ಕಾಲದಿಂದ ಹೋರಾಟ ನಡೆಯುತ್ತಿರುವ ಬೆಳಗಾವಿ ಜಿಲ್ಲೆಯಲ್ಲೂ ಹೋರಾಟದ ಕಿಚ್ಚು ಹೊತ್ತಿದೆ.
ಗೋಕಾಕದಲ್ಲಿ ಈಗಾಗಲೆ ಹೋರಾಟ ಶುರುವಾಗಿದೆ. ಉಪಚುನಾವಣೆ ಘೋಷಣೆಯಾಗಿದ್ದರಿಂದ ಹೋರಾಟವನ್ನು ಮುಂದೂಡಿದ್ದ ಹೋರಾಟಗಾರರು, ಉಪಚುನಾವಣೆ ಮುಂದಕ್ಕೆ ಹೋಗುತ್ತಿದ್ದಂತೆ ಹೋರಾಟ ಆರಂಭಿಸಿದ್ದಾರೆ.
ಗೋಕಾಕ ಶೂನ್ಯ ಸಂಪಾದನಾ ಮಠದ ಸ್ವಾಮಿಗಳ ನೇತೃತ್ವದಲ್ಲಿ ಗೋಕಾಕ ಜಿಲ್ಲೆಯ ಸಲುವಾಗಿ ಶೂನ್ಯ ಸಂಪಾದನ ಮಠದಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್, ಬಸ್ ನಿಲ್ದಾಣ ಮಾರ್ಗವಾಗಿ ಬಸವೇಶ್ವರ ಸರ್ಕಲ್ , ತಹಸೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಯಿತು. ನಗರದ ಬಸವೇಶ್ವರ ಸರ್ಕಲ್ ನಲ್ಲಿ ಪ್ರತಿಭಟನಾ ನಿರತರು ಮಾನವ ಸರಪಳಿ ನಿರ್ಮಿಸಿ, ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಗೋಕಾಕ ಜಿಲ್ಲೆಯ ಸಲುವಾಗಿ ಒಗ್ಗಟ್ಟಾಗಿ ನಾಳೆ ಬೆಳಗಾವಿ ನಗರಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಗೋಕಾಕ ಜಿಲ್ಲೆ ಸಲುವಾಗಿ ಮನವಿ ಪತ್ರ ನೀಡಲು ನಿರ್ಧರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ