Kannada NewsKarnataka NewsLatest

ಪ್ರತಿಭಟನೆ ಅನಿವಾರ್ಯವಾಗಬಹುದು – ವಿಶ್ವಹಿಂದೂ ಪರಿಷತ್ ಎಚ್ಚರಿಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಗೋಮಾಂಸ ಸಾಗಾಟ ನಿಲ್ಲಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಪ್ರತಿಭಟನೆ ಅನಿವಾರ್ಯವಾಗಬಹುದು ಎಂದು ವಿಶ್ವಹಿಂದೂ ಪರಿಷತ್ ಪ್ರಮುಖ ಕೃಷ್ಣ ಭಟ್ ಎಚ್ಚರಿಸಿದ್ದಾರೆ.

ಬಜರಂಗದಳದ  ಕಾರ್ಯಕರ್ತರು ಸತತವಾಗಿ ಗೋವುಗಳನ್ನ ರಕ್ಷಿಸಲು ತಮ್ಮ ಜೀವವನ್ನೇ ಒತ್ತೆ ಇಟ್ಟು  4, 5 ಗೋ ಮಾಂಸ ಸಾಗಿಸುವ ಗಾಡಿಗಳನ್ನು ಹಿಡಿದು ಪೋಲೀಸರ ಸಮ್ಮಖದಲ್ಲಿ ಕೇಸ್ ಮಾಡಿದ್ದಾರೆ.

ಆದರೂ ಮತ್ತೆ ಮತ್ತೆ ಗೋ ಮಾಂಸದ ಗಾಡಿಗಳು ಅಕ್ರಮವಾಗಿ ಅವ್ಯಾಹತವಾಗಿ ಸಾಗಾಟ ನಡೆಯುತ್ತಿದೆ. ಇದರಿಂದಾಗಿ ಹಿಂದೂ ಕಾರ್ಯಕರ್ತರು ಆಕ್ರೋಶಗೊಳ್ಳುತ್ತಿದ್ದಾರೆ. ತಕ್ಷಣ ಅವರಿಗೆ ಪರವಾನಗಿ ಕೊಡುವ ಡಾಕ್ಟರ್ ಗಳು, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಆಮಿಷ, ಒತ್ತಡಕ್ಕೆ ಮಣಿಯದೆ ಗೋವಿನ ರಕ್ಷಣೆಗೆ ಸಹಕರಿಸಿ ಪುಣ್ಯ ಕಾರ್ಯದಲ್ಲಿ ಕೈ ಜೋಡಿಸುವುದು ಒಳಿತು ಎಂದಿದ್ದಾರೆ.

ಒಮ್ಮೆ ಹಿಂದೂ, ಬಜರಂಗದಳ ಕಾರ್ಯಕರ್ತರ ತಾಳ್ಮೆಯ  ಕಟ್ಟೆ ಒಡೆಯಲು ಅವಕಾಶ ಕೊಟ್ಟರೆ ಕಾರ್ಲೆಯಲ್ಲಿ ನಡೆದ ಘಟನೆ ಪುನರ್ ಸಂಭವಿಸುವ ಸಾಧ್ಯತೆ ಹೆಚ್ಚು. ಅದಕ್ಕೆ ಅವಕಾಶ ಕೊಡದೆ, ಹಿಂದು ಸಮಾಜ ಆಕ್ರೋಶಗೊಳ್ಳುವ ಮುನ್ನ ಸಂಬಂಧ ಪಟ್ಟವರು ತಪ್ಪಿತಸ್ತರನ್ನು ಹಿಡಿದು ಕಠಿಣ ಕ್ರಮ ಕೈ ಕೊಳ್ಳುವದು ಒಳಿತು. ಇಲ್ಲವಾದರೆ ವಿಶ್ವ ಹಿಂದು ಪರಿಷತ್, ಬಜರಂಗದಳದ ಕಾರ್ಯಕರ್ತರು  ಸ್ವಾಮೀಜಿಗಳ, ಸಾದು ಸಂತರ ನೇತೃತ್ವದಲ್ಲಿ,  ಹಿಂದು ಸಮಾಜದ ಪ್ರಮುಖರನ್ನು ಜೋಡಿಸಿಕೊಂಡು ದೊಡ್ಡ ಹೋರಾಟವನ್ನು ಅನಿವಾರ್ಯವಾಗಿ ಮಾಡಲೇಬೇಕಾಗಬಹುದು ಎಂದು ಅವರು ಹೇಳಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button