ಪ್ರಗತಿವಾಹಿನಿ ಸುದ್ದಿ; ರಾಯಚೂರು: ಕಿರುಕುಳ ಆರೋಪ ಮಾಡಿ ಯುವಕನೊಬ್ಬ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಭಾರಿ ಸುದ್ದಿಯಾಗಿದ್ದ ರಾಯಚೂರು ಜಿಲ್ಲೆಯ ಸಿರಿವಾರ ಪೊಲೀಸ್ ಠಾಣೆ ಪಿಎಸ್ ಐ ಗೀತಾಂಜಲಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಸಾರ್ವಜನಿಕರಿಂದ ದೂರುಗಳ ಸುರಿಮಳೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಪಿಎಸ್ ಐ ಗೀತಾಂಜಲಿ ವಿರುದ್ಧ ಕ್ರಮ ಕೈಗೊಂಡಿದ್ದು, ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.
ಪಿ ಎಸ್ ಐ ಗೀತಾಂಜಲಿ ಅವರು ಮೂರು ತಿಂಗಳಿಂದ ಅನಗತ್ಯವಾಗಿ ಠಾಣೆಗೆ ನನ್ನನ್ನು ಕರೆದು ಕಿರುಕುಳ ನೀಡಿದ್ದಾರೆ. ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಲುತ್ತಿದ್ದೇನೆ ಎಂದು ಸಿರಿವಾರದ ಯುವಕ ತಾಮಣ್ಣ ಡೆತ್ ನೋಟ್ ಬರೆದಿಟ್ಟು ಡಿಸೆಂಬರ್ 3ರಿಂದ ನಾಪತ್ತೆಯಾಗಿದ್ದ. ಮೂರು ನಾಲ್ಕು ದಿನ ಕಳೆದರೂ ಮಗ ಮನೆಗೆ ಬಾರದಿದ್ದಾಗ ಪೋಷಕರು ಪಿ ಎಸ್ ಐ ವಿರುದ್ಧ ದೂರು ದಾಖಲಿಸಿದ್ದರು. ಪಿ ಎಸ್ ಐ ಗೀತಾಂಜಲಿ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು.
ಸಂಬಂಧಿಕರ ಜಮೀನಿನಲ್ಲಿ ಭತ್ತ ಕಟಾವು ಮಾಡಿದ್ದ ಆರೋಪವನ್ನು ತಾಮಣ್ಣ ಹೊತ್ತಿದ್ದ. ಈ ಹಿನ್ನೆಲೆಯಲ್ಲಿ ತಾಮಣ್ಣನನ್ನು ಠಾಣೆಗೆ ಕರೆದು ಪಿ ಎಸ್ ಐ ಗೀತಾಂಜಲಿ ವಿಚಾರಣೆ ನಡೆಸಿದ್ದರು. ತುಂಬಾ ಹೊತ್ತು ಲಾಕಪ್ ನಲ್ಲಿ ಇಟ್ಟಿದ್ದರು ಎನ್ನಲಾಗಿದೆ.
*ಹಲವು ಜಿಲ್ಲೆಗಳಲ್ಲಿ ಮಳೆ ಎಚ್ಚರಿಕೆ*
https://pragati.taskdun.com/karnatakarain2-daysimd/
https://pragati.taskdun.com/govina-karajolaattacksiddaramaiahkarnataka-maharastra-border-issue/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ